ಸ್ಟಾಲಿನ್ ವಿರುದ್ಧ ದಾವೆ

0
11
ಮುತಾಲಿಕ

ಮಂಗಳೂರು: ಸನಾತನ ಧರ್ಮದ ಕುರಿತು ಉದಯ ನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಸ್ಟಾಲಿನ್ ವಿರುದ್ಧ ದಾವೆ ಹೂಡುತ್ತೇವೆ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಸನಾತನ ಧರ್ಮಕ್ಕೆ ಆರಂಭ, ಅಂತ್ಯ ಇಲ್ಲ. ಸನಾತನ ಧರ್ಮದ ಮೇಲೆ ಈ ದೇವ ಭೂಮಿ ನಿಂತಿದೆ. ಇಂತಹ ಧರ್ಮದ ಕುರಿತು ನೀಡಿರುವ ಹೇಳಿಕೆ ಅತ್ಯಂತ ಕೆಟ್ಟದಾಗಿದೆ.
ಪೆರಿಯಾರ್ ಸಂಸ್ಕೃತಿಯಿಂದ ಬಂದ ಇಂತಹವರ ಆಟ ನಡೆಯುವುದಿಲ್ಲ. ಸ್ಟಾಲಿನ್ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಅವರು, ಹೇಳಿಕೆ ವಿರುದ್ಧ ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದರು.

Previous articleಹಾವಿಗೆ ಬರಬೇಡ ಎನ್ನಲು ಗೆದ್ದಲಿಗೆ ಧ್ವನಿ ಇಲ್ಲ; ಸಂಶಯವಿದ್ದರೆ ಡಿಸಿಎಂಗೆ ಕೇಳಿ ಎಂದ ಬಿಜೆಪಿ
Next articleಬೆಂಗಳೂರು-ಮೈಸೂರು ಜನತೆಗೆ ಕುಡಿವ ನೀರು ಬಂದ್: ರೈತರ ಎಚ್ಚರಿಕೆ