ಸೌಜನ್ಯ ಪ್ರಕರಣ: ಹಿಂದೂ ಸಂಘಟನೆಗಳಿಂದ ದೈವ, ದೇವರ ಮೊರೆ

0
9

ಮಂಗಳೂರು: ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಜಿಲ್ಲೆಯ ಹಿಂದೂ ಸಂಘಟನೆಗಳು ದೈವ, ದೇವರ ಮೊರೆ ಹೋಗಿದೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪುತ್ತೂರಿನ ಲಕ್ಷೀ ವೆಂಕಟರಮಣ, ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಕಾರಿಂಜದ ಶ್ರೀ ಪಾರ್ವತಿ ಪರಮೇಶ್ವರನ ಸನ್ನಿಧಿ, ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿ ಹಾಗೂ ಕಾರಣಿಕ ಕ್ಷೇತ್ರವಾದ ಪಣೋಲಿಬೈಲ್ ಶ್ರೀಕಲ್ಲುರ್ಟಿ, ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭಾಗಿಯಾಗಿದ್ದರು.

Previous articleಬ್ರೇನ್‌ ಟ್ಯೂಮರ್‌ನಿಂದ ಮೃತಪಟ್ಟ ಮಹಿಳೆಯ ಅಂಗಾಂಗ ರವಾನೆ
Next articleಗಣೇಶೋತ್ಸವ ಪೂರ್ವಭಾವಿ ಸಭೆ: ಏಕಗವಾಕ್ಷಿ ಮೂಲಕ ಪರವಾನಿಗೆ ನೀಡಲು ಸೂಚನೆ