ಸೋಷಿಯಲ್ ಮೀಡಿಯಾ ದುರುಪಯೋಗ ಬೇಡ: ಡ್ರಗ್ಸ್ ನಿಂದ ದೂರವಿರಿ

ಸಂ.ಕ. ಸಮಾಚಾರ, ಉಡುಪಿ: ಸೋಷಿಯಲ್ ಮೀಡಿಯಾ ದುರುಪಯೋಗ ಮಾಡಬೇಡಿ, ಡ್ರಗ್ಸ್ ನಿಂದ ದೂರವಿರಿ. ಇದು ಉಡುಪಿ ಹಾಶಿಮಿ ಮಸೀದಿಯ ಇಮಾಮ್ ಕರೆ.
ಶನಿವಾರ ನಡೆದ ಬಕ್ರೀದ್ ಹಬ್ಬದ ನಮಾಝ್ ಬಳಿಕ ಹಾಶಿಮಿ ಮಸೀದಿಯ ಇಮಾಮ್ ಉಬೇದಾರ್ ರೆಹಮಾನ್ ನದ್ವಿ ಸಮಾಜ ಬಾಂಧವರಿಗೆ ಕರೆ ನೀಡಿದರು.
ಸಾಮಾಜಿಕ ಜಾಲದಲ್ಲಿ ಅನ್ಯ ಸಮಾಜದವರನ್ನು ನಿಂದಿಸುವುದು ಅಥವಾ ಅವಹೇಳನಕಾರಿ ಪೋಸ್ಟ್ ಮಾಡದಿರಲು ಎಲ್ಲರಿಗೆ ಮುಖ್ಯವಾಗಿ ಯುವಜನತೆಗೆ ಸೂಚಿಸಿದರು‌.
ಡ್ರಗ್ಸ್ ಸೇವನೆಯಿಂದ ಅನೇಕ ಯುವಕರು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೆತ್ತವರು ತಮ್ಮ ಮಕ್ಕಳನ್ನು ಅದರಿಂದ ದೂರ ಇರುವಂತೆ ನೋಡಿಕೊಳ್ಳಲು ಕಿವಿಮಾತು ಹೇಳಿದರು.
ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ  ಹಾಗೂ ಶಾಂತಿಯ ಮಾರ್ಗವನ್ನು ಅನುಸರಿಸಬೇಕೆಂದು ಮನವಿ ಮಾಡಿದರು.
ಈದ್ ಅಲ್ ಅಧಾ ನಮಾಜ್ ಮಾಡಲು ಮಹಿಳಿಯರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.