ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: NIA ಮೂಲಕ ತನಿಖೆಗೆ ಆಗ್ರಹ

0
54

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ- NIA ಮೂಲಕ ತನಿಖೆ ನಡೆಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.
ಪ್ರಕರಣ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ NIA ಯಿಂದ ತನಿಖೆ ನಡೆಸಿದರೆ, ಅಪರಾಧಿಗಳನ್ನು ಕಾನೂನಿನ ಚೌಕಟ್ಟಿಗೆ ತರಲು ಸಾಧ್ಯ, ಈ ಘಟನೆಯ ನಂತರ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚೆ ನಡೆಸಬೇಕಾಗಿತ್ತು. ಆದರೆ ಆ ಕಾರ್ಯ ಮಾಡಿಲ್ಲ. ಬದಲಾಗಿ ಅಪರಾಧಿಗಳ ಸಹಾನೂಭೂತಿ ಇರುವವರ ಪರವಾಗಿ ಇರುವುದು ಅತ್ಯಂತ ಖಂಡನಾರ್ಹ. ಹತ್ಯೆ ಪ್ರಕರಣದ ಸೂಕ್ಷ್ಮತೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

Previous articleಪರಿಶಿಷ್ಟ ಸಮುದಾಯದವರು ಜಾತಿ ಹೆಸರು ಬದಲಿಸಲು ಅವಕಾಶ
Next articleರೌಡಿಶೀಟರ್ ಕಣುಮಾ ಕೊಲೆ ಪ್ರಕರಣ: 12 ಜನರ ವಿರುದ್ಧ ಎಫ್‌ಐಆರ್