ಬೆಳಗಾವಿ: ಸುವರ್ಣಸೌಧದ ಕಾರಿಡಾರನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಭಟನೆಗೆ ನಡೆಸಿದ್ದಾರೆ.
ವಿಧಾನ ಪರಿಷತ್ ಮೊಗಸಾಲೆಗೆ ಹೋಗುವಾಗ ನನ್ನ ಮೇಲೆ ಅಟ್ಯಾಕ್ ಮಾಡೋಕೆ ಬಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳಿಕೊಂಡು ಬಂದು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಶಾಸಕರಿಗೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ಇದೆ ಅಂದರೆ ಸರಕಾರ ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.
ಹೆಬ್ಬಾಳ್ಕರ್‌ಗೆ ಜೈಕಾರ ಹಾಕುತ್ತಾ ನನಗೆ ಧಿಕ್ಕಾರ ಹಾಕುತ್ತಾ ಬಂದಿರುವ ಗೂಂಡಾಗಳಿಗೆ ನಾನು ಹೆದರಲ್ಲ. ಸುಳ್ಳು ಆರೋಪ ನನ್ನ ಮೇಲೆ ಹೊರೆಸಿದ್ದಾರೆ. ಇದಕ್ಕೆ ನಾನು ಹೆದರಲ್ಲ. ಸಭಾಪತಿಯವರಿಗೆ ನಾನು ದೂರು ನೀಡಲು ಹೊರಟಿದ್ದ ವೇಳೆ ನನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.