ಸುಪ್ರೀಂನಲ್ಲಿ ದರ್ಶನ್ ವಿರುದ್ಧ ೧,೪೯೨ ಪುಟಗಳ ಮೇಲ್ಮನವಿ

0
24

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ರಾಜ್ಯ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಪಡೆಸುವಂತೆ ಕೋರಿ ರಾಜ್ಯ ಸರ್ಕಾರವು ೧,೪೯೨ ಪುಟಗಳ ಮೇಲ್ಮನವಿ ಸಲ್ಲಿಸಿದೆ. ಜ.೨೪ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ಕೊಲೆ ಪ್ರಕರಣದ ಆರೋಪಿಗಳಾಗಿರುವ ಪವಿತ್ರಾಗೌಡ, ದರ್ಶನ್, ನಾಗರಾಜು, ಅನುಕುಮಾರ್, ಲಕ್ಷ÷್ಮಣ್, ಜಗದೀಶ್ ಹಾಗೂ ಪ್ರದೂಷ್ ಸೇರಿ ೭ ಜನರ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಹಾಗೂ ಆರ್.ಮಹದೇವನ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. ವಕೀಲ ಅನಿಲ್ ನಿಶಾನಿ ಮತ್ತು ಅವರ ತಂಡ ಜಾಮೀನು ರದ್ದುಕೋರಿ ವಾದ ಮಂಡಿಸಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ೧೭ ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದೆ. ವಕೀಲ ಅನಿಲ್ ನಿಶಾನಿ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಬರೋಬ್ಬರಿ ಒಂದೂವರೆ ಸಾವಿರದಷ್ಟು ಪುಟಗಳು ಒಳಗೊಂಡಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ದೂರಿನ ಪ್ರತಿ, ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ, ಪ್ರತ್ಯಕ್ಷದರ್ಶಿಗಳು, ಎಫ್‌ಎಸ್‌ಎಲ್, ಐಎಫ್‌ಎಸ್‌ಎಲ್ ವರದಿ, ಆರೋಪಿಗಳ ಬಳಿ ವಶಪಡಿಸಿಕೊಂಡಿದ್ದ ಡಿಜಿಟಲ್ ವಸ್ತುಗಳು ಸೇರಿದಂತೆ ಆರೋಪಿಗಳ ವಿರುದ್ಧ ಸತತ ಮೂರು ತಿಂಗಳ ತನಿಖಾ ವಿಸ್ತೃತ ವರದಿ ಹಾಗೂ ಸೆಷನ್ ಕೋರ್ಟ್ ಜಾಮೀನಿನ ಆದೇಶ ಪ್ರತಿ, ದರ್ಶನ್ ನೀಡಿದ್ದ ಮಧ್ಯಂತರ ಜಾಮೀನು, ದರ್ಶನ್ ಅನಾರೋಗ್ಯ ಸಂಬಂಧಿಸಿದ ವೈದ್ಯರ ವರದಿ ಸೇರಿದಂತೆ ಹಲವು ಅಂಶಗಳು ಸುಪ್ರೀಕೋರ್ಟ್ಗೆ ಸಲ್ಲಿಸಲಾಗಿದೆ. ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಹೈಕೋರ್ಟ್ ನೀಡಿದ್ದ ಜಾಮೀನಿನ ಹಿನ್ನೆಲೆಯಲ್ಲಿ ನಿರಾಳರಾಗಿದ್ದರು. ಆದರೆ, ಈಗ ಜ.೨೪ ರಂದು ಜಾಮೀನು ರದ್ದು ಅರ್ಜಿ ವಿಚಾರಣೆಗೆ ಬರುವುದರಿಂದ ನಟ ದರ್ಶನ್ ಸೇರಿದಂತೆ ಇತರರಿಗೆ ನಡುಕ ಶುರುವಾಗಿದೆ.

Previous articleರೆಡ್ಡಿ ವಿರುದ್ಧ ತಿರುಗಿ ಬಿದ್ದ ಶ್ರೀರಾಮುಲು
Next articleಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಜಾರ್ಜ್