Home ತಾಜಾ ಸುದ್ದಿ ಸುಪ್ರೀಂ ಸಿಜೆ ಎನ್.ವಿ ರಮಣ ಇಂದು ನಿವೃತ್ತಿ

ಸುಪ್ರೀಂ ಸಿಜೆ ಎನ್.ವಿ ರಮಣ ಇಂದು ನಿವೃತ್ತಿ

0
205
ಎನ್.ವಿ ರಮಣ

ನವದೆಹಲಿ : ನೇರ ಮತ್ತು ನಿಷ್ಠುರತೆ ಹೆಸರಾಗಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಶುಕ್ರವಾರ ನಿವೃತ್ತರಾಗಲಿದ್ದಾರೆ. ೨೦೨೧ರ ಏಪ್ರಿಲ್ ೨೪ ರಂದು ಸರ್ವೋಚ್ಚ ನ್ಯಾಯಾಲಯದ ೪೮ನೇ ಸಿಜೆಯಾಗಿ ಅಧಿಕಾರ ವಹಿಸಿ ಕೊಂಡಿ ನ್ಯಾ. ರಮಣ ಅವರು ಪೆಗಸಸ್ ಹಗರಣ, ಬಿಲ್ಕಿಸ್ ಬಾನೋ ಪ್ರಕರಣ, ಲಖಿಂಪುರ ಖೇರಿ ಹಿಂಸಾಚಾರ ಸೇರಿದಂತೆ ಅನೇಕ ಪ್ರಕರಣಗಳ ವಿಚಾರಣೆ ನಡೆಸಿ ನಿಷ್ಪಕ್ಷಪಾತ ತೀರ್ಪು ನೀಡಿದವರು. ಒಟ್ಟಾರೆ ಸುಪ್ರೀಂನಲ್ಲಿ ಎಂಟು ವರ್ಷಗಳ ಸೇವಾವಧಿಯನ್ನು ರಮಣ ಅವರು ಪೂರ್ಣಗೊಳಿಸಿದಂತಾಗಿದೆ. ಮುಂದಿನ ಸಿಜೆಯಾಗಿ ನ್ಯಾ. ಉದಯ್ ಲಲಿತ್ ಪ್ರತಿಜ್ಞಾವಿಧಿ ಸೀಕರಿಸಲಿದ್ದಾರೆ.

ಎನ್.ವಿ ರಮಣ