Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಸಿದ್ರಾಮುಲ್ಲಾಖಾನ್‌ ಸರ್ಕಾರ ದಿವಾಳಿಯಾಗಿಬಿಟ್ಟಿದೆ

ಸಿದ್ರಾಮುಲ್ಲಾಖಾನ್‌ ಸರ್ಕಾರ ದಿವಾಳಿಯಾಗಿಬಿಟ್ಟಿದೆ

0
47

ಕಾರವಾರ: ಸಿದ್ದರಾಮುಲ್ಲಾಖಾನ್‌ಗೆ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಅಭಿವೃದ್ಧಿಗೆ, ಎಂ.ಎಲ್‌ಎಗೆ ಕೊಡಲು ಸಂಬಳ ಇಲ್ಲ ಎಂದು ಹೇಳುತ್ತಾರೆ. ಹಿಂದುಳಿದವರಿಗೆ ಕೊಟ್ಟ ೧೧ ಸಾವಿರ ಕೋಟಿ ರೂ. ನಾಪತ್ತೆಯಾಗಿ ಬಿಟ್ಟಿದೆ. ರಾಜ್ಯ ಸರ್ಕಾರ ದಿವಾಳಿಯಾಗಿಬಿಟ್ಟಿದೆ. ಸಿದ್ದರಾಮಯ್ಯನ ಸರ್ಕಾರದ ತರ ಮೋದಿ ಸರ್ಕಾರ ದಿವಾಳಿ ಆಗಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಮುಂಡಗೋಡಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯವನ್ನು ಲೂಟಿ ಹೊಡೆದು, ದಿವಾಳಿ ಮಾಡಿ, ಓಟು ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನವರು ಹೊರಟಿದ್ದಾರೆ. ಇಷ್ಟು ದರಿದ್ರ ಸರ್ಕಾರ ನೋಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಮಗೆ ಕೇಂದ್ರ ಸರ್ಕಾರ ಟ್ಯಾಕ್ಸ್ ಹಣ ಕೊಟ್ಟಿಲ್ಲ ಎನ್ನುತ್ತಾರೆ, ತಮಿಳುನಾಡಿಗೆ ಇಲ್ಲದ ವೇದನೆ, ಆಂಧ್ರದವರಿಗೆ ಇಲ್ಲದ ವೇದನೆ ಕೇರಳಕ್ಕೆ ಇರದ ವೇದನೆ ಇವರಿಗೇಕೆ? ಅವರು ಕೇಳಬಹುದಿತ್ತಲ್ಲ. ಅನ್ಯಾಯ ಮಾಡಿದ್ರೆ ಅವರಿಗೂ ಬಿಜೆಪಿಯವರಲ್ಲ ಎಂದು ಮೋದಿಯವರು ಅವರಿಗೂ ಹಣ ಕೊಡದೇ ಕಳುಹಿಸಬಹುದಿತ್ತು. ಅವರಿಗ್ಯಾಕೆ ಎಲ್ಲಾ ಸರಿಯಾಗುತ್ತಿದೆ. ನಮ್ಮ ಸಿದ್ದರಾಮುಲ್ಲಾಖಾನ್‌ಗೆ ಏಕೆ ಈ ತೊಂದರೆ? ಹೆತ್ತವರಿಗೆ ಹೆರಿಗೆ ಬೇನೆ ಗ್ಯಾರಂಟಿ. ಆದ್ರೆ ಈ ಸಿದ್ದರಾಮಯ್ಯನಿಗೆ ಏಕೆ? ಈ ಮನುಷ್ಯನಿಗೆ ದುರಹಂಕಾರ. ದುರಹಂಕಾರಕ್ಕೋಸ್ಕರ ಯಾವ ಫೈಲ್‌ನ್ನು ಸಹ ಚೀಟಿ ಬರೆಯುತ್ತಾನೆ, ಓಸಿ ಚೀಟಿ ಬರೆದಂತೆ ಬರೆಯುತ್ತಾನೆ. ಓಸಿ ಚೀಟಿಗಾದರೂ ಬೆಲೆ ಇರುತ್ತದೆ. ಒಂದು ರೂಪಾಯಿ ಕೊಟ್ಟರೆ ೮೦ ರೂ. ಕೊಡ್ತಾರೆ. ಸಿದ್ದರಾಮಯ್ಯನವರು ಬರೆದಂತ ಲೆಟರ್‌ಗೆ ಎಷ್ಟು ದುರಂಹಕಾರದ ಸಹಿ ಹಾಕುತ್ತಾರೆ ಎಂದರೇ ಆ ಲೆಟರ್ ಕೂಡ ನೋಡಬಾರದು ಎಂದನಿಸುತ್ತದೆ. ಅಷ್ಟರಮಟ್ಟಿಗೆ ದುರಹಂಕಾರ. ನಿಮ್ಮಪ್ಪನದ ಆಸ್ತಿ, ನಾವು ಕೊಟ್ಟಿರೋ ಸಾವಿರಾರು ಕೋಟಿ ದುಡ್ಡಿಗೆ ಲೆಕ್ಕ ಕೊಡಿ, ನಾವು ಕೊಟ್ಟಿರೋ ದುಡ್ಡಿಗೆ ಮೊದಲು ಲೆಕ್ಕಾ ಕೊಡಿ ಆಮೇಲೆ ಮುಂದಿನದ್ದು ಕೊಡ್ತೀವಿ ಎಂದರು.

Previous articleದೆಹಲಿ ಪ್ರತಿಭಟನಾಕಾರರು ರೈತರಲ್ಲ, ದೇಶದ್ರೋಹಿಗಳು !
Next articleಹೆಗಡೆ ಸಂಸದಕ್ಕೆ ಲಾಯಕ್ಕಿಲ್ಲ