ಕುಷ್ಟಗಿ: ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ಆರು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದ ಸೀಮಾದಲ್ಲಿ ನಡೆದಿದೆ.
ಶಾಂತಮ್ಮ ದುರಗಪ್ಪ ಕಮತರ(65) ಎಂಬ ಮಹಿಳೆಯೇ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಫಕೀರಸಾಬ ನೈನಾಪೂರು, ರಮಜಾನಬೀ ನೈನಾಪೂರು, ಶಿವು ಆರಿ ಎನ್ನುವವರು ಗಾಯಗೊಂಡಿದ್ದಾರೆ. ಫಕೀರಸಾಬ ನೈನಾಪೂರು ಅವರಿಗೆ ಸೇರಿದ 5 ಕುರಿಗಳು, ಒಂದು ಟಗರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.