ಧಾರವಾಡ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧದ ಮುಡಾ ಪ್ರಕರಣದ ವಿಚಾರಣೆ ಇಲ್ಲಿಯ ಹೈಕೋರ್ಟಿನಲ್ಲಿ ಪ್ರಾರಂಭವಾಗಿದೆ.
ಕಳೆದ ವಾರ ಲೋಕಾಯುಕ್ತ ಅಧಿಕಾರಿಗಳಿಗೆ ಇಲ್ಲಿಯ ವರೆಗೆ ಕೈಗೊಂಡ ತನಿಖಾ ವರದಿ ಸಲ್ಲಿಸಿವಂತೆ ಸೂಚಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿತ್ತು. ನ್ಯಾಯಾಲಯದ ನಿರ್ದೇಶನದಂತೆ ಲೋಕಾ ಇಂದು ಮುಚ್ಚಿದ ಲಕೋಟೆಯಲ್ಲಿ ೩೦೦ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.
ಮೈಸೂರು ಎಸ್‌ಪಿ ಉದೇಶ ಹಾಗೂ ಸಿಬ್ಬಂದಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಮುಖ ದ್ವಾರದಲ್ಲಿ ಹೈ ಸೆಕ್ಯೂರಿಟಿ ನೀಡಿ, ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ.
ಅರ್ಜಿದಾರ ಸ್ನೇಹ ಮಯಿ ಕೃಷ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸೇರಿ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳಿಗೆ ಶಿಕ್ಷೆ ಖಚಿತ ಮುಡಾದಲ್ಲಿ ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ. ನಾನು ಕೇವಲ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡುತಿಲ್ಲ ಸಿದ್ದರಾಮಯ್ಯ ಉದಾಹರಣೆ ಇಟ್ಕೊಂಡು ಎಲ್ಲವೂ ತನಿಖೆ ಆಗಬೇಕು. ತನಿಖೆ ಆದರೆ ಸಿದ್ದರಾಮಯ್ಯ,ಪ್ರಭಾವಿ ರಾಜಕಾರಣಿಗಳು ಜೈಲಿಗೆ ಹೋಗೋದು ಖಚಿತ ಇವತ್ತು ಹೈ ಕೋರ್ಟ್ ನಲ್ಲಿ ವಿಚಾರಣೆ ಇದೆ. ಇವತ್ತು ಶೇ. 99 ರಷ್ಟು ಆದೇಶ ಹೊರಬರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.