ಸಿಎಂ ಕನಸು ಯಾರಿಗೂ ಸರಿಯಲ್ಲ

0
32

ಬೆಂಗಳೂರು: ಸಿಎಂ ಆಗುವ ಹಗಲು ಕನಸು ಕಾಣೋಕೆ ಹೋಗಬೇಡಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿಂದು ಮಾತನಾಡಿದ ಅವರು, ಸಿಎಂ ಈಗ ಶಕ್ತಿಶಾಲಿ ಇದ್ದಾರೆ, ಇನ್ನಷ್ಟು ಶಕ್ತಿಶಾಲಿ ಆಗ್ತಾರೆ. ದೇಶಪಾಂಡೆಯವರು ಸುಮ್ಮನೆ ಮಾತನಾಡಿದ್ದಾರೆ. ಯಾರೋ ಕೇಳಿದ ಪ್ರಶ್ನೆಗೆ ನಾನು ಹಿರಿಯ ಇದ್ದೇನೆ, ಯಾಕೆ ಸಿಎಂ ಆಗಬಾರದು ಎಂದು ಕ್ಯಾಶ್ಯುವಲ್ ಆಗಿ ಮಾತಾಡಿದ್ದಾರೆ. ಕೇಳಿದ್ದಕ್ಕೆ ಹೇಳ್ತಾರೆ ಅಷ್ಟೇ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವಿಚಾರಕ್ಕೆ, ಭೇಟಿ ಮಾಡಿದ್ರೆ ತಪ್ಪೇನು. ಎರಡು ತಿಂಗಳ ಹಿಂದೆ ಪರಮೇಶ್ವರ್ ನಮ್ಮ ಮನೆಗೂ ಬಂದಿದ್ದರು. ಮೊನ್ನೆ ನಾನು ಪರಮೇಶ್ವರ್ ಮನೆಗೆ ಹೋಗಿದ್ದೆ. ಕ್ಷೇತ್ರ ಮತ್ತು ಪಕ್ಷದ ವಿಚಾರ ಚರ್ಚೆ ಮಾಡಬಾರದಾ?. ರಾಜಕೀಯವಾಗಿ, ಪಕ್ಷದ ಬೆಳವಣಿಗೆಗಳ ಕುರಿತು ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
ಖರ್ಗೆ ಹಿರಿಯರು, ಎಐಸಿಸಿ ಅಧ್ಯಕ್ಷರಿದ್ದಾರೆ. ನಮಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಅವರಿಗೆ ಅನುಭವವಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ ಕುರಿತ ತನಿಖಾ ಆಯೋಗದ ವರದಿ ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿ, ಈ ಹಗರಣದಲ್ಲಿ ಸುಧಾಕರ್ ನಿಶ್ಚಿತವಾಗಿ ಭಾಗಿಯಾಗಿದ್ದಾರೆ ಎಂದರು.

Previous article೪೫೦೦ ಪುಟದ ಚಾರ್ಜ್‌ಶೀಟ್ ಸಿದ್ಧ
Next articleನಾನು ಹಿಂದೂ ಗಬ್ಬರ್ ಸಿಂಗ್…. ಮಸೀದಿಯಲ್ಲೇ ದಾಳಿ ಮಾಡ್ತೇನೆ