ಸಿ.ಟಿ.ರವಿ ಪ್ರಕರಣ: ಪೊಲೀಸ್ ಕ್ರಮದಲ್ಲಿ ಹಸ್ತಕ್ಷೇಪ ಮಾಡಿಲ್ಲ

0
39

ಸಿ.ಟಿ.ರವಿ ಈ ಹಿಂದೆಯೂ ಹಲವು ನಾಯಕರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ವಿಚಾರದಲ್ಲಿ ಪೊಲೀಸ್ ಕ್ರಮದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾನಹಾನಿಕರ ಬಳಸಿ ನಿಂದಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಅವರು ಪೊಲೀಸ್ ಕ್ರಮದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸಿ.ಟಿ.ರವಿ ಜೊತೆ ಪೊಲೀಸರು ಅತ್ಯಂತ ಸೌಜನ್ಯವಾಗಿ ವರ್ತಿಸಿದ್ದಾರೆ. ನಾವು ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ತಮ್ಮ ಶಾಸಕಿಗೆ ಅಪಮಾನ ಮಾಡಿದರೆ ಕ್ಷೇತ್ರದ ಜನ ರೊಚ್ಚಿಗೇಳುವುದು ಸಹಜ ಎಂದರು.

Previous articleಸಿ.ಟಿ. ರವಿ ಅವಾಚ್ಯ ಪದ ಏಕೆ ಬಳಸಿದರು
Next articleಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ