ಸಾಹಿತಿ ಹೆಚ್ ಎಸ್ವಿ ನಿಧನದಿಂದ ಅವರ ತವರು ದಾವಣಗೆರೆ ಜಿಲ್ಲೆಯಲ್ಲಿ ಆವರಿಸಿದ ನೀರವಮೌನ

0
14

ದಾವಣಗೆರೆ: ಭಾವಗೀತೆಗಳಿಗೆ ಹೆಸರಾದ ಕವಿ, ಸಾಹಿತಿ ಡಾ.ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದು, ಇಡೀ ಸಾಹಿತ್ಯಲೋಕ ಮತ್ತವರ ಅಭಿಮಾನಿ ಬಳಗ ಕಂಬನಿ ಮಿಡಿದಿದ್ದು, ಮೂಲತಃ ದಾವಣಗೆರೆ ಜಿಲ್ಲೆಯವರಾಗಿರುವ ಹೆಚ್ ಎಸ್ವಿ ನಿಧನದಿಂದ ಇಡೀ ಜಿಲ್ಲೆಯಲ್ಲಿ ನೀರವಮೌನ ಆವರಿಸಿದೆ.

ಎಂಭತ್ತರ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನಾಲ್ವರು ಮಕ್ಕಳಿದ್ದು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ., ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರಾದ ಹೆಚ್.ಎಸ್ವಿ ದಾವಣಗೆರೆ ಬಗ್ಗೆ ವಿಶೇಷ ಪ್ರೀತಿ ಗೌರವವವನ್ನು ಇಟ್ಟುಕೊಂಡಿದ್ದರು. ಹೊದಿಗೆರೆಯಲ್ಲೂ ನೀರವ ಮೌನ ಆರಿಸಿದೆ. ದಾವಣಗೆರೆಯ ಸಾಹಿತ್ಯ ಸಮ್ಮೇಳನಕ್ಕೂ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಹ್ವಾನಿಸಬೇಕೆಂಬ ನಿರೀಕ್ಷೆ ಇಲ್ಲಿನ ಕಸಾಪಗೆ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ನಿರೀಕ್ಷೆ ಹುಸಿಯಾಯಿತು.

ಸಾಹಿತ್ಯ ಕೃಷಿಮಾಡಿ ಅಪಾರ ಸಾಹಿತ್ಯಾಭಿಮಾನಿಗಳನ್ನು ಗಳಿಸಿಕೊಂಡಿದ್ದರು. ‘ಪರಿವೃತ್ತ’ ಅವರ ಮೊದಲ ಕವನ ಸಂಕಲನ. ಒಟ್ಟಾರೆ ಜಿಲ್ಲೆಯ ಒಬ್ಬ ಧೀಮಂತ ಕವಿ ಬಾರದ ಲೋಕಕ್ಕೆ ತೆರಳಿದ್ದಾರಾದರೂ ಅವರ ಭಾವತುಂಬಿದ ಕವಿತೆಗಳು, ಸಾಹಿತ್ಯ ಎಲ್ಲರೊಳಗೆ ಜೀವಂತ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ.

Previous articleಪತ್ನಿ ಕಾಟಕ್ಕೆ ಬೇಸತ್ತ ಗಂಡ: ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ
Next articleಮಕ್ಕಳ ಗಲಾಟೆ: ತಾಯಿ ಕೊಲೆಯಲ್ಲಿ ಅಂತ್ಯ