ಸಾವಿನಲ್ಲೂ ಒಂದಾದ ದಂಪತಿ

0
36

ಧಾರವಾಡ : ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಸಾವಿನಲ್ಲೂ ಒಂದಾಗಿಯೇ ಇಹ ಲೋಕ ತ್ಯಜಿಸಿದ್ದಾರೆ.

ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ (82 ) ಹಾಗೂ ಅವರ ಪತ್ನಿ ಪಾರವ್ವಾ ಆರೇರ(73) ಸೋಮವಾರ ಬೆಳಗಿನ ಜಾವ ತಮ್ಮ‌ ನಿವಾಸದಲ್ಲಿಯೆ ಇಹ ಲೋಕ ತ್ಯಜಿಸಿದ್ದಾರೆ.

ನಾಲ್ವರು ಪುತ್ರಿಯರು, 12 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ದಂಪತಿಗಳು ಅಗಲಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪಾರವ್ವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ರವಿವಾರ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದವರು, ಬೆಳಕಾಗುವಷ್ಟರಲ್ಲಿಯೇ ಇಹ ಲೋಕದಿಂದಲೇ ಪಯಣ ಬೆಳೆಸಿದ್ದಾರೆ.

ಸಾವಿನಲ್ಲಿ ಒಂದಾದ ದಂಪತಿಗಳ ನ್ನು ನೋಡಿ ದೇವರ ಹುಬ್ಬಳ್ಳಿ ಗ್ರಾಮಸ್ಥರಿಗೂ ಕೂಡ ಮಮ್ಮಲ ಮರುಗಿದ್ದು,ಇಂದು ಸಂಜೆಯೇ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ.

Previous articleರಾಷ್ಟ್ರ ರಾಜಧಾನಿಯಲ್ಲಿ  ಪ್ರಬಲ ಭೂಕಂಪನ
Next articleಒಂದೇ ಕುಟುಂಬದ ನಾಲ್ವರು ಸಾವು: ಆತ್ಮಹತ್ಯೆ ಶಂಕೆ