ಸಾಲಬಾಧೆ : ರೈತ ಆತ್ಮಹತ್ಯೆ

ಕೆಂಭಾವಿ : ರೈತನೋರ್ವ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಪಟ್ಟಣ ಸಮೀಪದ ನಗನೂರು ಗ್ರಾಮದಲ್ಲಿ ನಡೆದಿದೆ.
ತಿಪ್ಪಣ್ಣ ಕಟ್ಟಿಮನಿ (43) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಮೃತ ರೈತ ಪ್ರಾಥಮಿಕ ಕೃಷಿ ಪತ್ತಿನ  ಬ್ಯಾಂಕ  ಹಾಗೂ ಗ್ರಾಮೀಣಾ ಬ್ಯಾಂಕ ಹಾಗೂ ಖಾಸಗಿಯಾಗಿ ಹಾಗೂ  8 ಲಕ್ಷ ರುಕ್ಕಿಂತ ಅಧಿಕ ಸಾಲ  ಮಾಡಿಕೊಂಡಿದ್ದು,  ಬೆಳೆ ಕೈಕೊಟ್ಟ ಹಿನ್ನಲೆ  ಸಾಲಕ್ಕೆ ಹೆದರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು  ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .