ಸಾಲ ವಸೂಲಿ: ಬೈಕ್‍ಗೆ ಬೆಂಕಿ ಹಚ್ಚಿ ಆಕ್ರೋಶ

0
22

ಕೋಲಾರ: ಸಾಲ ವಸೂಲಿಗೆ ತೆರಳಿದ್ದ ವೇಳೆ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಬೈಕ್‍ಗೆ ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ ನಡೆದಿದೆ. ಸ್ತ್ರೀಶಕ್ತಿ ಸಂಘದ ಸಾಲ ವಸೂಲಾತಿಗೆ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಕೋಲಾರದ ಮುಳಬಾಗಿಲಿನ ಬಿಸ್ನಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೇ ಅಲ್ಲಿದ್ದ ಬೈಕ್‍ಗೆ ಬೆಂಕಿ ಹಚ್ಚಿ ಸಿಬ್ಬಂದಿ ಮತ್ತೆ ಬಂದರೆ ಅವರ ಬೈಕ್‍ಗೂ ಇದೇ ಗತಿ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ವಸೂಲಿಗೆ ತೆರಳಿದಾಗ ಮಹಿಳೆಯರು ಸಾಲ ಮನ್ನಾ ಎಂಬ ಘೋಷಣೆಯನ್ನು ತೋರಿಸುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ನಮ್ಮ ಸರ್ಕಾರ ರಚನೆಯಾದ ನಂತರ ಸ್ತ್ರೀಶಕ್ತಿ ಸಂಘದ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದ ವೀಡಿಯೋವನ್ನು ತೋರಿಸುತ್ತಿದ್ದಾರೆ. ಆದರೂ ಪದೇ ಪದೇ ಸಾಲ ವಸೂಲಿಗೆ ಬರುತ್ತಿರುವ ಸಿಬ್ಬಂದಿ ವಿರುದ್ಧ ಮಹಿಳೆಯರು ಗಲಾಟೆ ನಡೆಸಿದ್ದಾರೆ.

Previous articleಕೊಪ್ಪಳದ ವೃದ್ಧೆಯ ಮನೆಗೆ ೧ ಲಕ್ಷ ರೂಪಾಯಿ ವಿದ್ಯುತ್‌ ಬಿಲ್‌
Next articleಹಿರಿಯ ಪತ್ರಕರ್ತ ಮುಳ್ಳಳ್ಳಿ ಸೂರಿ ನಿಧನ