ಹುಬ್ಬಳ್ಳಿ: ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಮತ್ತು ಅವುಗಳ ದುರ್ಬಳಕೆ ತಡೆಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಶನರೇಟ್ ವತಿಯಿಂದ ನೂತನ ಇ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಾನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದಲ್ಲಿ ೮೨೭೭೯೫೨೮೨೮ ಈ ಸಂಖ್ಯೆಗೆ ವಾಟ್ಸ್ಅಪ್‌ನಲ್ಲಿ hi ಎಂದು ಸಂದೇಶ ಕಳುಹಿಸಬೇಕು. ಬಳಿಕ ಸಂದೇಶ ಕಳುಹಿಸಿದ ವಾಟ್ಸ್ ಅಪ್ ನಂಬರಿಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಲಿಂಕ್ ತೆರೆದು ಕೇಳಲಾದ ಅವಶ್ಯಕ ಮಾಹಿತಿ ಭರ್ತಿಮಾಡಿ ಸಬ್ ಮಿಟ್ ಮಾಡಬೇಕು. ನಂತರ ಕಳೆದುಕೊಂಡ ಮೊಬೈಲ್‌ನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.