ಸಾರಿಗೆ ಸಿಬ್ಬಂದಿಗೆ ತಾವು ತೋರಿದ ಕಾಳಜಿ ನೆನಪಿಸಿಕೊಳ್ಳಿ

0
16

ಹುಬ್ಬಳ್ಳಿ: ಸಾರಿಗೆ ಸಿಬ್ಬಂದಿಗೆ ಅರ್ಧ ವೇತನ ಪಾವತಿ-ಇಂದು ಅರ್ಧದಷ್ಟು ಅನುದಾನ ಎಂದು ಹೇಳುತ್ತಿರುವ ಬೊಮ್ಮಾಯಿಯವರೇ ತಾವು ತಮ್ಮ ಆಡಳಿತದ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗಳೆಡೆಗೆ ತೋರಿದ ಕಾಳಜಿಯನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್‌ ಅವರು ಅವರು, ಸಾರಿಗೆ ಇಲಾಖೆ ಆದೇಶದಲ್ಲಿ Ad-hoc ಆಧಾರದಲ್ಲಿ  ಎಂದು ನಮೂದಿಸಲಾಗಿದ್ದು, ಎಲ್ಲಿಯೂ ಕೂಡ ಅರ್ಧದಷ್ಟು ಅನುದಾನ ಮಂಜೂರು ಎಂದು ನಮೂದಾಗಿಲ್ಲ. ತಾವು ಆದೇಶದ‌ ಪ್ರತಿಯನ್ನು ಮತ್ತೊಮ್ಮೆ ಅವಗಾಹಿಸುವುದು. ತಮ್ಮ ಆಡಳಿತದ ಅವಧಿಯಲ್ಲಿ, ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ ವೇತನವನ್ನು 25ನೇ ದಿನಾಂಕದವರೆಗೂ ಹಾಗೂ ಈ ತಿಂಗಳ ವೇತನವನ್ನು ಮುಂದಿನ ತಿಂಗಳು ನೀಡಿರುವಂತಹ ಉದಾಹರಣೆಗಳು ಸಹ ಇವೆ ಎಂದಿದ್ದಾರೆ.

ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗದೇ,‌ ನಮ್ಮ ಅವಧಿಯಲ್ಲಿ ಸೇರ್ಪಡೆಗೊಂಡ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಿದ್ದೀರಿ, ತಮ್ಮ ಅವಧಿಯಲ್ಲಿ‌ ಒಂದೇ ಒಂದು ನೇಮಕಾತಿ ಆಗಿಲ್ಲ, 16,000 ಸಿಬ್ಬಂದಿ ಕೊರತೆಯನ್ನು ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿದ್ದು, ನಾವು 13,000 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ್ದಾರೆ. ತಮ್ಮ ಅವಧಿಯಲ್ಲಿ  ಬಿಎಂಟಿಸಿ‌ ಹೊರತುಪಡಿಸಿ, ಇತರೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, 2022-2023ರ ಆರ್ಥಿಕ ವರ್ಷದ ಅವಧಿಗೆ ನಾಲ್ಕೂ ಸಾರಿಗೆ ಸಂಸ್ಥೆಗಳ ಸಾರಿಗೆ ಆದಾಯದ ಮೇಲಿನ ನಷ್ಟ ರೂ. 4330.41 ಕೋಟಿ. ಇದು ತಮ್ಮ ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

Previous articleಎರಡನೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ವೀಕ್
Next articleಯಮಸಲ್ಲೇಖನ ವ್ರತದಲ್ಲಿದ್ದ ಧೈರ್ಯಮತಿ ಮಾತಾಜಿ ಜಿನೈಕ್ಯ