`ಸಾರಥಿ ನಗರ ಮಸೀದಿಗೆ ಬೀಗ’

0
14
ಮಸೀದಿ

ಬೆಳಗಾವಿ: ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗಾವಿ ಸಾರಥಿ ನಗರದ ಮಸೀದಿ ವಿರುದ್ಧ ಮಹಾನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಮಸೀದಿಗೆ ಬೀಗ ಹಾಕುವಂತೆ ವಕ್ಫ್ ಬೋರ್ಡ್‌ಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಕ್ಫ್ ಕಮಿಟಿ ಸಾರಥಿ ನಗರ ಮಸೀದಿಗೆ ಬೀಗ ಜಡಿದಿದೆ.
ಅನುಮೋದಿತ ನಕ್ಷೆ ಉಲ್ಲಂಘಿಸಿ ಧಾರ್ಮಿಕ ಕಟ್ಟಡ ಕಟ್ಟುತ್ತಿರುವ ಆರೋಪ ಕೇಳಿ ಬಂದಿತ್ತು. ಕಟ್ಟಡ ಕಾಮಗಾರಿ ಹಾಗೂ ಧಾರ್ಮಿಕ ಚಟುವಟಿಕೆ ತಕ್ಷಣ ನಿಲ್ಲಿಸಲು ಬೆಳಗಾವಿ ಜಿಲ್ಲಾ ವಕ್ಫ್ ಕಾರ್ಯಾಲಯದ ಅಧಿಕಾರಿಗೆ ಮಹಾನಗರ ಪಾಲಿಕೆ ಆಯುಕ್ತರು ನೋಟಿಸ್ ನೀಡಿದ್ದರು.

Previous articleಸುಪ್ರೀಂ ಮೊರೆ ಹೋದ ಗೋವಾ ಸರ್ಕಾರ
Next articleಶ್ರೀಗುರುಬಸವ ಪಟ್ಟದೇವರು, ಎಸ್.ಬಸವರಾಜುಗೆ ಸಂಯಮ ಪ್ರಶಸ್ತಿ