ಸಾಮೂಹಿಕ ಲೈಂಗಿಕ ದೌರ್ಜನ್ಯ

0
14

ಮೈಸೂರು: ಯುವತಿಯೊಬ್ಬರ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತ ಯುವತಿಯೇ ಖುದ್ದು ಹಾಜರಾಗಿ ದೂರು ನೀಡಿದ್ದಾರೆ. ಘಟನೆ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತೆಯು ಮಡಿಕೇರಿ ಮೂಲದವರಾಗಿದ್ದು, ಭಾನುವಾರ ನಗರಕ್ಕೆ ಬಂದು ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದರು ಎನ್ನಲಾಗಿದೆ. ಈ ವೇಳೆ ಜೊತೆಯಲ್ಲಿದ್ದ ಸ್ನೇಹಿತರು ಒಟ್ಟುಗೂಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ವಶಕ್ಕೆ ಪಡೆಯಲಾಗಿರುವ ಶಂಕಿತರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂತ್ರಸ್ತ ಯುವತಿಯ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

Previous articleಹಾಸನಾಂಬ ಜಾತ್ರೆ ೧೨ ಕೋ. ಆದಾಯ
Next articleಪೌತಿ ಖಾತೆ ಸಮಸ್ಯೆ ತ್ವರಿತ ಕ್ರಮ ಅಗತ್ಯ