Home ನಮ್ಮ ಜಿಲ್ಲೆ ಕೋಲಾರ ಸರ್ವೆಗೆ ಹಾಜರಾಗಲು ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ  ನೋಟೀಸ್

ಸರ್ವೆಗೆ ಹಾಜರಾಗಲು ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ  ನೋಟೀಸ್

0
132

ಕೋಲಾರ: ಹೈಕೋರ್ಟ್ ಆದೇಶದಂತೆ ಜನವರಿ ೧೫ರಂದು ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ಭೂಮಿಯ ಜಂಟಿ ಸರ್ವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಮತ್ತು ಸರ್ವೆಗೆ ಹಾಜರಾಗುವಂತೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ ಸೋಮವಾರ ಖುದ್ದಾಗಿ ನೋಟೀಸು ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಹೈಕೋರ್ಟ್ ನೀಡಿರುವ ೨೦೧೦, ೨೦೧೩ ಮತ್ತು ೨೦೨೪ರ ಆದೇಶದ ಪ್ರಕಾರ ಜಂಟಿ ಸರ್ವೆ ನಡೆಯಲಿದೆ. ಜನವರಿ ೧೫ರಂದೇ ಸರ್ವೆ ನಡೆಸಲು ನ್ಯಾಯಾಲಯವೇ ದಿನಾಂಕ ನಿಗಧಿಪಡಿಸಿದೆ. ಹಾಗಾಗಿ ಅದನ್ನು ಪಾಲಿಸುವುದಷ್ಟೇ ನಮ್ಮ ಕೆಲಸ. ಅಂದು ಬೆಳಗ್ಗೆ ೯-೩೦ಕ್ಕೆ ಜಂಟಿ ಸರ್ವೆ ಆರಂಭಗೊಳ್ಳಲಿದೆ ಎಂದು ವಿವರಿಸಿದರು.
ಜಂಟಿ ಸರ್ವೆಗೆ ಹಾಜರಾಗುವಂತೆ ಜನವರಿ ೪ರಂದೇ ನೋಟೀಸನ್ನು ಅಂಚೆ ಮೂಲಕ ಕಳಿಸಲಾಗಿದೆ. ಸೋಮವಾರ ಖುದ್ದಾಗಿಯೂ ಅವರಿಗೆ ಜಾರಿ ಮಾಡಿ ಸ್ವೀಕೃತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.