ಸಮಾವೇಶ ಮಾಡಿದರೆ ಪಾಪ ಕಳೆದುಹೋಗುತ್ತದೆಯೇ?

0
32

ಬೆಂಗಳೂರು: ಸೈಟು ಲಪಟಾಯಿಸಿ ಸ್ವಾಭಿಮಾನಿ ಸಮಾವೇಶ ಮಾಡಿದರೆ ಪಾಪ ಕಳೆದುಹೋಗುತ್ತದೆಯೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿಎಂ ಸಿದ್ದರಾಮಯ್ಯನವರ ಪತ್ನಿಯವರಿಗೆ 14 ನಿವೇಶನ ಹಂಚಿಕೆ ಮಾಡುವಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಇ.ಡಿ. ವರದಿಯಲ್ಲಿ ಬಯಲಾಗಿದ್ದು, ಮೂಡಾ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿಗಳು ಈಗ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ಸಿಎಂ ಸಿದ್ದರಾಮಯ್ಯನವರೇ, ನಮ್ಮ ದೇಶದಲ್ಲಿ ಕಾನೂನು ಇನ್ನೂ ಗಟ್ಟಿಯಾಗಿದೆ. ತರಾತುರಿಯಲ್ಲಿ ಲೋಕಾಯುಕ್ತ ತನಿಖೆ ಮುಗಿಸಿ ಕ್ಲೀನ್ ಚಿಟ್ ಪಡೆದುಕೊಂಡು ಜನರ ಕಣ್ಣಿಗೆ ಮಣ್ಣೆರೆಚುವ ನಿಮ್ಮ ತಂತ್ರ ಫಲಿಸುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸತ್ಯಮೇವ ಜಯತೇ! ಎಂದಿದ್ದಾರೆ.

Previous articleಬೆಂಗಳೂರಿನಿಂದ ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ
Next articleಸಂಭಾಲ್‌ಗೆ ತೆರಳುತ್ತಿದ್ದ ರಾಹುಲ್ ಗಾಂಧಿಯನ್ನು ತಡೆದ ಪೊಲೀಸ್‌ರು