Home ತಾಜಾ ಸುದ್ದಿ ಸಮಾನತೆ ಇಲ್ಲದೇ ಹಿಂದೂ ಸಂವಿಧಾನದ ಬಗ್ಗೆ ಮಾತನಾಡಬೇಡಿ

ಸಮಾನತೆ ಇಲ್ಲದೇ ಹಿಂದೂ ಸಂವಿಧಾನದ ಬಗ್ಗೆ ಮಾತನಾಡಬೇಡಿ

0
139

ಬಾಗಲಕೋಟೆ: ಪ್ರಯಾಗರಾಜ್‌ನಲ್ಲಿ ಪ್ರತ್ಯೇಕ ಹಿಂದೂ ಸಂವಿಧಾನದ ನಿರ್ಧಾರ ಕೈಗೊಂಡಿರುವವರು ಮೊದಲು ಹಿಂದೂಗಳಲ್ಲಿರುವ ಎಲ್ಲರನ್ನು ಸಮಾನವಾಗಿ ಕಾಣುವುದನ್ನು ಕಲಿಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿಗೂ ಸಮಾಜದಲ್ಲಿ ಅಸಮಾನತೆ ಇದೆ. ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ಕಲಿಯಲಿ. ಹಿಂದೂಗಳಲ್ಲೇ ಇರುವ ಶೋಷಿತರನ್ನು ಹಿಂದೂಗಳಾಗಿ ಕಾಣುತ್ತಿಲ್ಲ. ಮೊದಲು ಅದನ್ನು ಮಾಡಲಿ ಎಂದು ಹೇಳಿದರು.