ಸಭಾಪತಿ ಹೊರಟ್ಟಿಯವರಿಗೆ `ಪರಿಮಳ ಪ್ರಶಸ್ತಿ’ ಪ್ರದಾನ

0
21
HORATTI

ಹುಬ್ಬಳ್ಳಿ: ಮಂತ್ರಾಲಯದಲ್ಲಿ ಸ್ಪೈಸ್ ಮೀಡಿಯಾ ಮತ್ತು ಸೈಕಲ್ ಅಗರಬತ್ತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಉಭಯ ಸಂಸ್ಥೆಗಳ ವತಿಯಿಂದ ಪರಿಮಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯ ರಾಘವೇಂದ್ರ ಸ್ವಾಮಿಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳು ಪರಿಮಳ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಆಶೀರ್ವಚನ ನೀಡಿದ ಶ್ರೀಪಾದಂಗಳು, ಹೋರಾಟಕ್ಕೆ ಪರ್ಯಾಯ ಹೆಸರೇ ಹೊರಟ್ಟಿ ಎನ್ನುವಂತಹ ನುಡಿ ಕನ್ನಡ ನಾಡಿನೆಲ್ಲೆಡೆ ಪ್ರಚಲಿತದಲ್ಲಿದೆ. ತಮ್ಮ ಅನೇಕ ಹೋರಾಟಗಳ ಮೂಲಕ ಸಭಾಪತಿ ಬಸವರಾಜ ಹೊರಟ್ಟಿಯವರು ಕನ್ನಡ ನಾಡಿನ ಎಲ್ಲ ಶಿಕ್ಷಕರ ಬಾಳನ್ನು ಬೆಳಗಿದ್ದಾರೆ. ಅದರಲ್ಲೂ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಬಗ್ಗೆ, ಅಲ್ಲಿನ ನೌಕರರ ಬಗ್ಗೆ ಹೊರಟ್ಟಿಯವರಿಗೆ ಇನ್ನಿಲ್ಲದ ಪ್ರೀತಿ ಎಂದರು.

Previous articleಸಿದ್ದರಾಮಯ್ಯ ಸಿದ್ದಾಂತವಿಲ್ಲದ ನಾಯಕ
Next articleಜೀವನದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರಿ: ಜೋಶಿ