ಸದೈವ ಅಟಲ್’​ ಸ್ಮಾರಕಕ್ಕೆ ಪ್ರಧಾನಿಯಿಂದ ಪುಷ್ಪನಮನ

0
24

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಗೌರವ ನಮನ ಸಲ್ಲಿಸಿದರು.
ವಾಜಪೇಯಿ ಅವರು ಮೇ 16, 1996 ರಿಂದ ಜೂನ್ 1, 1996 ರವರೆಗೆ ಮತ್ತು ಮತ್ತೆ 19 ಮಾರ್ಚ್ 1998 ರಿಂದ 22 ಮೇ 2004 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಟಲ್ ಬಿಹಾರಿ ವಾಜಪೇಯಿ 2018 ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಇಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ ಅಟಲ್‌ ಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ‘ಸದೈವ್‌ ಅಟಲ್‌’ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದೆ. ದೇಶ ಸೇವೆ ವಿಚಾರದಲ್ಲಿ ಅಟಲ್‌ ಜಿ ನಮಗೆಲ್ಲಾ ಸ್ಫೂರ್ತಿ. ಅವರು ಭಾರತದ ಪರಿವರ್ತನೆಗೆ ಶ್ರಮಿಸಿದ ಪ್ರವರ್ತಕ’ ಎಂದು ಹೇಳಿದ್ದಾರೆ.

Previous articleಭಕ್ತಾಪರಾಧ ಸಹಿಷ್ಣು ಭಗವಂತ
Next articleಸೀರೆಯ ಎಳೆ ಎಳೆಯಲ್ಲಿ ಅರಳಿದ ಕಲೆ.