ಕಡೂರು: ಮಾಜಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರ ಕಾರು ಅಪಘಾತವಾದ ಘಟನೆ ನಡೆದಿದೆ.
ಬೆಳಿಗ್ಗೆ ಕಡೂರು ತಾಲೂಕಿನ ಹೇಮಗಿರಿ ಗೇಟಿನ ಬಳಿ ಈ ಘಟನೆ ನಡೆದಿದ್ದು, ಗುಜರಿ ವ್ಯಾಪಾರದ ಆಟೋಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದೆ ಎನ್ನಲಾಗಿದೆ. ಆಟೋ ಚಾಲಕನನ್ನು ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.