ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಮತ್ತೊಂದು ಸುಮೋಟೊ ಪ್ರಕರಣ

0
9

ಮುಂಡಗೋಡ: ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ವ್ಯಂಗ್ಯ ಮಾಡಿ ಭಾಷಣದಲ್ಲಿ ಧಾರ್ಮಿಕ ಭಾವನೆ ಕೆರಳಿಸುವ, ಧರ್ಮ ನಿಂದನೆ ಮಾಡಿದ ಆರೋಪದಡಿ ಮುಂಡಗೋಡ ಪೊಲೀಸರು ಶನಿವಾರ ರಾತ್ರಿ ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಫೆ. ೨೩ರಂದು ನಡೆದ ಸಭೆಯಲ್ಲಿ ಮಾತನಾಡಿದ್ದ ಹೆಗಡೆ, “ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್” ಎಂದು ಸಂಬೋಧಿಸಿದ್ದರು. ಅಲ್ಲದೆ ದೇಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಅವರು ದೇಶದ್ರೋಹಿಗಳು ಎಂದು ಹೇಳಿದ್ದರು. ಈ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತಿದ್ದಂತೆ ವಿಡಿಯೋ ತುಣುಕಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ರಾಮುಲ್ಲಾಖಾನ್ ಅವರಿಗೆ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಅಭಿವೃದ್ಧಿಗೂ ದುಡ್ಡಿಲ್ಲ ಅಂತಾರೆ. ಹಿಂದುಳಿದವರಿಗೆ ಕೊಟ್ಟ ೧೧ ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಿದ್ದರಾಮಯ್ಯ ಸರ್ಕಾರದಂತೆ ಮೋದಿ ಸರ್ಕಾರ ದಿವಾಳಿ ಆಗಿಲ್ಲ ಎಂದಿದ್ದರು.

Previous article28ರಂದು ಹುಬ್ಬಳ್ಳಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್
Next articleಬೈಕ್ ಓವರ್‌ಟೇಕ್ ವಿಚಾರಕ್ಕೆ ಹಲ್ಲೆ: ಯುವಕ ಸಾವು