ಸಂಜಯ ಪಾಟೀಲ ಮನೆ ಎದುರು ಮಹಿಳೆಯರ ಪ್ರತಿಭಟನೆ

0
16

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ್ ನಿವಾಸದ ಬಳಿ ಕಾಂಗ್ರೆಸ್ ‌ಮಹಿಳಾ‌ ಕಾರ್ಯಕರ್ತರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸುಸಂಸ್ಕೃತ ಪಕ್ಷ, ಮಹಿಳೆಯರಿಗೆ ರಕ್ಷಣೆ ನೀಡುವ ಬಿಜೆಪಿಯಲ್ಲಿ‌ ಮಾಜಿ ಶಾಸಕ ಸಂಜಯ ಪಾಟೀಲ್‌ ಕರ್ನಾಟಕ ರಾಜ್ಯದ ‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದು ಸಂಜಯ ಪಾಟೀಲ್ ಫೋಟೋಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Previous articleಮಳೆರಾಯನ ಆರ್ಭಟ: ಸಿಡಿಲಿಗೆ ಓರ್ವ ಬಲಿ
Next articleಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ: ೧೨ ಜನರ ವಿರುದ್ಧ ಎಫ್‌ಐಆರ್