ಶ್ರೀರಾಮನ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ

0
16

ಮಂಡ್ಯ : ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರೋ ಚಿಂತಕ ಕೆ ಎಸ್‌ ಭಗವಾನ್ ಮತ್ತೇ ಸುದ್ದಿಯಲ್ಲಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮಧ್ಯಾಹ್ನ ಆದರೆ ಸಾಕು, ಸೀತೆ ಜೊತೆಗೆ ಹೆಂಡ ಕುಡಿದುಕೊಂಡು ಕುಳಿತಿರುತ್ತಿದ್ದ, ರಾಮ ಆಕೆಗೂ ಕುಡಿಸುತ್ತಿದ್ದ ಎಂದು ಹೇಳಿದ್ದಾರೆ.
ರಾಮ ರಾಜ್ಯಕ್ಕೆ ಯಾವುದೇ ಅರ್ಥವಿಲ್ಲ, ರಾಮ ತನ್ನ ಆಡಳಿತದ ಸಮಯದಲ್ಲಿ ಪುರೋಹಿತರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ ಅಲ್ಲದೇ ಲಕ್ಷ್ಮಣನನ್ನು ಆತ ಗಡಿಪಾರು ಮಾಡಿದ್ದ, ಸೀತೆಯನ್ನು ಕಾಡಿಗೆ ಕಳುಹಿಸಿದ್ದ ಎಂದು ಹೇಳಿದ್ದಾರೆ.
ನದಿಯ ದಡಲ್ಲಿ ಅತ್ತುಕೊಂಡು ಲಕ್ಷ್ಮಣ ಸತ್ತು ಹೋದ. ಶೂದ್ರನ ತಲೆಯನ್ನು ರಾಮ ಕಡಿದಿದ್ದಾನೆ. ರಾಮನನ್ನು ಆದರ್ಶ ದೊರೆ ಎಂದು ಕರೆಯಲು ಹೇಗೆ ಸಾಧ್ಯ. ನಮ್ಮ ಜನರಿಗೆ ಸತ್ಯ ಗೊತ್ತಿಲ್ಲದೆ ಮಕ್ಕಳಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳು ರಾಮ ರಾಮ ಅಂತಾರೆ, ರಾಮ ತನ್ನ ಹೆಂಡತಿಯನ್ನು ಕಾಡಿಗೆ ಕಳಿಸಿದವ ಎಂದಿದ್ದಾರೆ.

Previous articleಸಹೋದರಿಯರ ಸಾಮೂಹಿಕ ಆತ್ಮಹತ್ಯೆ
Next articleಕರ್ತವ್ಯನಿರತ ಪೊಲೀಸ್ ಸಾವು: ಮೃತನ ಕುಟುಂಬಕ್ಕೆ 1 ಲಕ್ಷ ಪರಿಹಾರ