Home Advertisement
Home ಕ್ರೀಡೆ ಶ್ರೀರಂಗಪಟ್ಟಣದಲ್ಲಿ ಗಮನ ಸೆಳೆದ ದಸರಾ ಕ್ರೀಡಾಕೂಟ

ಶ್ರೀರಂಗಪಟ್ಟಣದಲ್ಲಿ ಗಮನ ಸೆಳೆದ ದಸರಾ ಕ್ರೀಡಾಕೂಟ

0
75

ಶ್ರೀರಂಗಪಟ್ಟಣ: 2023 ಮೈಸೂರು ದಸರಾ ಮಹೋತ್ಸವದ ಅಂಗವಾಗಿ‌ ಇಂದು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವು ನೋಡುಗರ ಗಮನ ಸೆಳೆಯಿತು. ಕ್ರೀಡಾಕೂಟದಲ್ಲಿ, ಓಟ, ಭರ್ಜಿ‌ ಎಸೆತ,‌ ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಖೋಖೋ, ಕಬಡ್ಡಿ, ವಾಲಿಬಾಲ್,‌ ಥ್ರೋಬಾಲ್ ಸೇರಿದಂತೆ ಇನ್ನಿತರೆ ಕ್ರೀಡೆಗಳು ಜರುಗಿದವು. ಕ್ರೀಡೆಯಲ್ಲಿ ವಯೋಮಿತಿಯನ್ನು ಮಾರೆತು ಭಾಗವಹಿಸಿದ ತಾಲ್ಲೂಕಿನ ವಿವಿಧ ಗ್ರಾಮಗಳ ಕ್ರೀಡಾಪಟುಗಳು ಗೆಲುವಿಗಾಗಿ ಸೆಣಸಾಟ ನಡೆಸಿದರು. ಹಾಗೆಯೇ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ದಸರಾ ಕ್ರೀಡಾಕೂಟದ ಯಶಸ್ಸಿಗೆ ಕಾರಣಕರ್ತರಾಗುವುದರೊಂದಿಗೆ ತಮ್ಮ ಕ್ರೀಡಾಸ್ಪೂರ್ತಿ ಪ್ರದರ್ಶಿಸಿದರು.

Previous articleಸಹಜ ಸ್ಥಿತಿಯತ್ತ ಬೆಂಗಳೂರು
Next articleರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಸಾಧ್ಯವಿದೆಯೇ