ಶ್ರೀಕಿ ವಿರುದ್ಧ ಕೋಕಾ ಜಾರಿ

0
7

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಸಹಚರ ರಾಬಿನ್ ಖಂಡೇಲ ವಾಲಾ
ವಿರುದ್ಧ ಅಪರಾಧ ತನಿಖಾ ದಳದ (ಸಿಐಡಿ) ವಿಶೇಷ ತನಿಖಾ ದಳವು (ಎಸ್‌ಐಟಿ) ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯನ್ನು (ಕೋಕಾ) ಹೇರಿದೆ.
ಯುನೋ ಕಾಯಿನ್ ಹ್ಯಾಕ್ ಪ್ರಕರಣದಲ್ಲಿ ಮೇ ೭ರಂದು ಬಂಧಿತನಾಗಿರುವ ಶ್ರೀಕಿ ಹಾಗೂ ಆತನ ಮ್ಯಾನೇಜರ್ ಹುದ್ದೆಯಲ್ಲಿದ್ದು, ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಎದುರಿಸುತ್ತಿರುವ ಸಹ ಆರೋಪಿ ರಾಬಿನ್ ಖಂಡೇಲವಾಲಾ ವಿರುದ್ಧವೂ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ.

Previous articleಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಿದ್ಯುತ್ ಕಂಬವೇರಿದ್ದ ವ್ಯಕ್ತಿ ರಕ್ಷಣೆ
Next articleʻಹವಾ ಮೆಂಟೇನ್‌ʼಗೆ ನಕಲಿ ಐಬಿ ವೇಷ: ಬಂಧನ