Home Advertisement
Home ತಾಜಾ ಸುದ್ದಿ ಶೆಟ್ಟರ ಮಗಳ ಮದುವೆ: ರಾಹುಲ್‌ಗೆ ಆಮಂತ್ರಣ

ಶೆಟ್ಟರ ಮಗಳ ಮದುವೆ: ರಾಹುಲ್‌ಗೆ ಆಮಂತ್ರಣ

0
95

ನವದೆಹಲಿ: ಕಾಂಗ್ರೆಸ್ ವಕ್ತಾರ ಧ್ರುವ ಜತ್ತಿ ಇಂದು ನವದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ವಿವಾಹ ಮಹೋತ್ಸವಕ್ಕಾಗಿ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಧ್ರುವ ಜತ್ತಿ ಜೊತೆ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಪುತ್ರಿ ಅಮೋಘಾ ವಿವಾಹ ಫಿಕ್ಸ್ ಆಗಿದ್ದು. ಡಿಸೆಂಬರ್ 5ರಂದು ಧ್ರುವ ಹಾಗೂ ಅಮೋಘಾ ಅವರ ವಿವಾಹ ಕಾರ್ಯಕ್ರಮ ಹುಬ್ಬಳ್ಳಿಯ ನವೀನ್ ಹೋಟೆಲ್‌ನಲ್ಲಿ ನಡೆಯಲಿದ್ದು, ಆರತಕ್ಷತೆ ಕಾರ್ಯಕ್ರಮ ಡಿಸೆಂಬರ್ 07ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಧ್ರುವ ಜತ್ತಿ ಅವರು ಜತ್ತಿ ಫೌಂಡೇಶನ್ ಮುಖಾಂತರ ಸಮಾಜ ಸೇವೆ ಮಾಡುತ್ತಿದ್ದು, ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಧ್ರುವ ಜತ್ತಿ ಮತ್ತು ಅಮೋಘಾ ಶೆಟ್ಟರ್ ವಿವಾಹ ನಿಶ್ಚಯ ಗಮನ ಸೆಳೆದಿದೆ.

Previous articleಇಡಿ ಅಧಿಕಾರಿಗಳಿಂದ ಕುಮಾರರ ವಿಚಾರಣೆ
Next articleಸರಕಾರಿ ಜಮೀನಿನಲ್ಲಿದ್ದ ಮನೆ ನೆಲಸಮ: ವೃದ್ಧ ಕೂಲಿ ಕಾರ್ಮಿಕ ದಂಪತಿ ಬೀದಿಪಾಲು