ಶೃಂಗೇರಿಯಲ್ಲಿ ಜೆಡಿಎಸ್ ‘ಬಿ’ ಫಾರಂಗೆ ಪೂಜೆ

0
16

ಚಿಕ್ಕಮಗಳೂರು: ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಅವರ ‘ಬಿ’ ಫಾರಂಗೆ ಶೃಂಗೇರಿಯ ದೇಗುಲಗಳಲ್ಲಿ ಪೂಜೆ ಮಾಡಿಸಿದರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಎಚ್.ಡಿ.ರೇವಣ್ಣ ಅವರು, ಬಿ’ ಫಾರಂ ಸಹಿತ ಶ್ರೀ ಕ್ಷೇತ್ರ ಶೃಂಗೇರಿಗೆ ಒಬ್ಬರೇ ಆಗಮಿಸಿದರು.

ಶಾರದಾಂಬೆ ಹಾಗೂ ತೋರಣ ಗಣಪತಿಯ ಸನ್ನಿಧಿಯಲ್ಲಿ ‘ಬಿ’ ಫಾರಂ ಇರಿಸಿ, ಪೂಜೆ ಮಾಡಿಸಿಕೊಂಡು ವಾಪಸ್ ತೆರಳಿದರು.

ಪ್ರಜ್ವಲ್ ರೇವಣ್ಣ ಅವರು ಎರಡನೇ ಬಾರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

Previous articleಪಕ್ಷವಿದ್ರೆ ನಾವೆಲ್ಲಾ, ಪಕ್ಷ ಇಲ್ಲಾಂದ್ರೆ ನಾವ್ಯಾರೂ ಇಲ್ಲ…
Next articleರಾಮೇಶ್ವರ ಕೆಫೆ ಬ್ಲಾಸ್ಟ್ ಭಯೋತ್ಪಾದಕರು ತೀರ್ಥಹಳ್ಳಿಯವರು ಎಂಬುದು ತಲೆ ತಗ್ಗಿಸುವ ವಿಚಾರ