ಕುರ್ಚಿ ಕಿತ್ತಾಟದ ಕ್ಲೈಮಾಕ್ಸ್ ಅತ್ಯಂತ ರಣರೋಚಕ
ಬೆಂಗಳೂರು: ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅತೀ ಶೀಘ್ರದಲ್ಲೇ ಹೇಗೆ ಒದ್ದು ಅಧಿಕಾರ ಕಿತ್ತುಕೊಳ್ಳಲಿದ್ದಾರೆ ಎನ್ನುವುದರ ಮತ್ತೊಂದು ಟ್ರೈಲರ್ ಇಂದು ದೆಹಲಿಯಲ್ಲಿ ಬಿಡುಗಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗೃಹ ಸಚಿವ ಜಿ ಪರಮಶ್ವೇರ್ ಅವರ ಡಿನ್ನರ್ ಮೀಟಿಂಗ್ ಅನ್ನ ದೆಹಲಿಯ ಹೈಕಮಾಂಡ್ ಮೂಲಕ ಏಕಾಏಕಿ ರದ್ದು ಪಡಿಸಿದ ಡಿಸಿಎಂ ಸಾಹೇಬರು, ಈಗ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಬೈರತಿ ಸುರೇಶ್ ಅವರನ್ನ ದೆಹಲಿಯ ನೂತನ ಎಐಸಿಸಿ ಕಚೇರಿಯ ಬಾಗಿಲಲ್ಲೇ ನಿಲ್ಲಿಸಿ ಕಾಂಗ್ರೆಸ್ ಹೈಕಮಾಂಡ್ ತನ್ನ ಜೇಬಿನಲ್ಲಿದೆ ಎನ್ನುವ ಸಂದೇಶವನ್ನು ರವಾನಿಸುವಲ್ಲಿ ಮತ್ತೊಮ್ಮೆ ಯಶಸ್ವಿ ಆದಂತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಈ ಕುರ್ಚಿ ಕಿತ್ತಾಟದ ಕ್ಲೈಮಾಕ್ಸ್ ಅತ್ಯಂತ ರಣರೋಚಕವಾಗಿರುವುದು ಮಾತ್ರ ಪಕ್ಕಾ ಗ್ಯಾರೆಂಟಿ ಎಂದಿದ್ದಾರೆ.