ಬೆಂಗಳೂರು: ಜಾಮೀನಿನ ಮೇಲೆ ಹೊರ ಬಂದಿರುವ ಪವಿತ್ರಾ ಗೌಡ ಶಿರಡಿ ಸಾಯಿಬಾಬಾನ ದರ್ಶನ ಪಡೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ಕೋರ್ಟ್ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸುತ್ತಿರುವ ಪವಿತ್ರಾ ಅವರು ಶಿರಡಿ ಸಾಯಿಬಾಬಾನ ದರ್ಶನ ಪಡೆದಿದ್ದಾರೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪವಿತ್ರಾ ಅವರ ರೆಡ್ ಕಾರ್ಪೆಟ್ 777 ಸ್ಟುಡಿಯೋ ಮುಚ್ಚಿತ್ತು, ಇನ್ನು ಅದಕ್ಕೆ ಮರು ಜೀವ ನೀಡಲು ಸಿದ್ಧರಾಗಿ. ಬೇಕಾದ ವಸ್ತುಗಳನ್ನೆಲ್ಲ ಖರೀದಿ ಮಾಡಲು ದೆಹಲಿಗೆ ಹೋಗಿದ್ದ ಪವಿತ್ರಾ ಗೌಡ ಸದ್ಯ ಶಿರಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿಬಾಬಾ ದರ್ಶನ ಪಡೆದು ಪೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಂಡಿದ್ದು ಕೆಲವೇ ಗಂಟಟೆಗಳಲ್ಲಿ ವೈರಲ್ ಆಗಿವೆ.