ಕೋಲಾರ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುನಿಸಿಗೆ ತುತ್ತಾಗಿದ್ದ ಬಂಗಾರಪೇಟೆ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಎತ್ತಂಗಡಿ ಆಗಿದೆ.
ಕೇವಲ ಐದಾರು ತಿಂಗಳ ಹಿಂದಷ್ಟೇ ಬಂಗಾರಪೇಟೆಗೆ ಬಂದಿದ್ದ ವೆಂಕಟೇಶಪ್ಪ ವಿರುದ್ಧ ಶಾಸಕ ಎಸ್ಸೆನ್ ಮುನಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆ ಸರ್ಕಾರಿ ಸಭೆಯೊಂದರಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದೀಗ ವೆಂಕಟೇಶಪ್ಪರನ್ನು ಕೋಲಾರ ಜಿಲ್ಲಾಧಿಕಾರಿ ಕಚೇರಿ ಪುರಸಭಾ ತಹಸೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಹಿಂದಿನ ತಹಸೀಲ್ದಾರ್ ಯು.ರಶ್ಮಿರನ್ನು ವರ್ಗಾಯಿಸಿದ ವೇಳೆ ಸ್ವತಹ ಶಾಸಕ ನಾರಾಯಣಸ್ವಾಮಿ ಅವರೇ ಮುತುವರ್ಜಿ ವಹಿಸಿ ವೆಂಕಟೇಶಪ್ಪರನ್ನು ಬಂಗಾರಪೇಟೆಗೆ ನಿಯೋಜನೆ ಮಾಡಿಸಿದ್ದರು. ಕೆಲವೇ ದಿನಗಳಲ್ಲಿ ಅವರ ವಿರುದ್ಧ ಎಸ್.ಎನ್ ಮುನಿಸಿಕೊಂಡಿದ್ದರು. ಇದೀಗ ವೆಂಕಟೇಶಪ್ಪ ಎತ್ತಂಗಡಿ ಶಿಕ್ಷೆಗೆ ತುತ್ತಾಗಿದ್ದಾರೆ.
ವೆಂಕಟೇಶಪ್ಪ ಸ್ಥಾನಕ್ಕೆ ಜಿಲ್ಲಾಧಿಕಾರಿ ಕಛೇರಿ ಮುಜರಾಯಿ ತಹಸೀಲ್ದಾರ್ ಕೆ.ಎನ್.ಸುಜಾತರನ್ನು ಸರ್ಕಾರ ನೇಮಕ ಮಾಡಿದೆ.