ಶಾಲೆಗಳಿಗೆ ಕೇಸರಿ ಬಣ್ಣ, ಎಲ್ಲದರಲ್ಲೂ ರಾಜಕಾರಣ ಸಲ್ಲದು: ಸಿಎಂ

0
12
ವಿವೇಕ್‌

ಕಲಬುರಗಿ: ಕಲಬುರಗಿ ತಾಲ್ಲೂಕಿನ ಮಡಿಹಾಳ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಯೋಜಿಸಿದ್ದ ವಿವೇಕ ಶಾಲಾ ಕೊಠಡಿಗಳ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದಾದ್ಯಂತ ವಿವೇಕ ಹೆಸರಿನ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿವೇಕರ ಹೆಸರಿನಲ್ಲಿ ಕೊಠಡಿ ನಿರ್ಮಾಣ ಮಾಡುವುದು ಕೇಸರೀಕರಣವಾಗುವುದಿಲ್ಲ, ರಾಜ್ಯದ ಹಲವು ಕಡೆಗಳಲ್ಲಿ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ರಾಜ್ಯ ಸರ್ಕಾರ 7601 ಶಾಲಾ ಹಾಗೂ ಕಾಲೇಜುಗಳ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಧರಿಸಿದ್ದು ಖಾವಿ, ರಾಷ್ಟ್ರಧ್ವಜದಲ್ಲಿರುವುದು ಕೇಸರಿ ಬಣ್ಣ. ಹಾಗಾಗಿ ನೂತನ ಕೊಠಡಿಗಳು ಕೇಸರಿ ಬಣ್ಣದಲ್ಲಿ ಇದ್ದರೆ ತಪ್ಪೇನು? ಈ ಯೋಜನೆಯನ್ನು ವಿರೋಧಿಸುವವರು ಅಭಿವೃದ್ಧಿಯನ್ನು ಸಹಿಸದವರು ಎಂದರು.

Previous articleಪ್ರಿಯಾಂಕ್ ಖರ್ಗೆ ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ಅಂದರ್
Next articleಹಿಂದುಗಳ ರಕ್ಷಣೆಗೆ 25 ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್