ಶಕುನಿಗಳಿಂದ ಹಾಸನ ಟಿಕೆಟ್ ಹಂಚಿಕೆ ವಿಳಂಬ

0
29
ಎಚ್.ಡಿ. ಕುಮಾರಸ್ವಾಮಿ

ಬಳ್ಳಾರಿ: ಹಾಸನ ಕ್ಷೇತ್ರ ಹೊರತುಪಡಿಸಿ, ರಾಜ್ಯದ 42 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ದಗೊಂಡಿದ್ದು, ಏ. 12ರಂದು ಬಿಡುಗಡೆಗೊಳಿಸಲಾಗುವುದು. ಹಾಸನದಲ್ಲಿ ಬ್ರೇನ್‌ವಾಶ್ ಮಾಡುವ ಹಿತಶತ್ರುಗಳು, ಶಕುನಿಗಳು ಇದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಕಾರ್ಯಕ್ರಮ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ಕಾರ್ಯಕ್ರಮಕ್ಕೆ ಬರುವ ಮುನ್ನ 42 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟು ಬಂದಿದ್ದೇನೆ. ಬಹುಶಃ ಬುಧವಾರ ಬೆಳಗ್ಗೆ ಬಿಡುಗಡೆಗೊಳಿಸಲಾಗುವುದು. ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರವನ್ನು ಸೇರಿಸಿಲ್ಲ. ಅದು ಇನ್ನು ಫೈನಲ್ ಸಹ ಆಗಿಲ್ಲ. ಹಾಸನದ ಗೊಂದಲ ಬೇರೆಯಿದ್ದು, ಹಾಸನ ಕ್ಷೇತ್ರದ ಟಿಕೆಟ್ ಕಾರ್ಯಕರ್ತರ ಭಾವನೆಯಲ್ಲಿ ತೀರ್ಮಾನ ಆಗಬೇಕು ಎಂಬುದು ನನ್ನ ನಿಲುವಾಗಿದೆ. ಹಾಗಾಗಿ ಅದನ್ನು ಪೆಂಡಿಂಗ್ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Previous articleಕಾಡಾನೆ ಕಾರ್ಯಾಚರಣೆಗೆ ಬೀಡು ಬಿಟ್ಟ ಅರಣ್ಯ ಇಲಾಖೆ!
Next articleಆರ್‌ಸಿಬಿ ಬೃಹತ್‌ ಮೊತ್ತ