ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರ ತೆಗೆದ ವೈದ್ಯರು

0
27
ನಾಣ್ಯ

ಬಾಗಲಕೋಟೆ: ವ್ಯಕ್ತಿಯೊಬ್ಬ ಒಂದೂವರೆ ಕೆಜಿ ತೂಕವಾಗುವ ೧೮೭ ನಾಣ್ಯಗಳನ್ನು ನುಂಗಿ ಕೊನೆಗೆ ಆತನನ್ನು ನಗರದ ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆ ವೈದ್ಯರು ಎಂಡೋಸ್ಕೋಪಿ ನಡೆಸಿ ಬದುಕುಳಿಸಿರುವ ಅಪರೂಪದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ದ್ಯಾಮಪ್ಪ ಹರಿಜನ(೫೮) ನಾಣ್ಯಗಳನ್ನು ನುಂಗಿದ ವ್ಯಕ್ತಿ. ಈತ ಸ್ಕಿಜಿಯೊಫ್ರೇನಿಯಾ ಎಂಬ ಮಾನಸಿಕ ಕಾಯಿಲೆಯ ಅಸ್ವಸ್ಥ ಎಂದು ಹೇಳಲಾಗಿದೆ. ಒಂದುವರೆ ಕೆಜಿ ತೂಕದ ಕಾಯಿನ್‌ಗಳನ್ನು ನುಂಗಿದ್ದರಿಂದ ಹೊಟೆ ಉಬ್ಬರಿಸಿತ್ತು. ಆಗ ಸಂಬಂಧಿಕರು ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಗ ಅಪಾಯ ಅರಿತ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮೂಲಕ ಕಾಯಿನ್‌ಗಳನ್ನು ಹೊರ ತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ.
ಈ ವ್ಯಕ್ತಿ ೫ ರೂಪಾಯಿಯ ೫೬ ನಾಣ್ಯ, ೨ ರೂಪಾಯಿಯ ೫೧ ನಾಣ್ಯ ಹಾಗೂ ೧ ರ ೮೦ ನಾಣ್ಯಗಳು ಸೇರಿ ಒಟ್ಟು ೧೮೭ ನಾಣ್ಯಗಳನ್ನು ನುಂಗಿ ವೈದ್ಯ ಲೋಕಕ್ಕೆ ಸವಾಲೆನಿಸಿದ್ದ.

Previous articleವರದಿ ಬಂದರೆ ಸನ್ಮಾನ.. ಇಲ್ಲದಿದ್ದರೆ ಧಿಕ್ಕಾರ
Next articleಮುಂದಿನ ಬಾರಿ ಕಾಂಗ್ರೆಸ್‌ಗೆ ಅಧಿಕಾರ