ವೈದ್ಯರ ಮೇಲೆ ಹಲ್ಲೆ ಖಂಡಿಸಿ ಓಪಿಡಿ ಬಂದ್‌

0
16

ಚಿಕ್ಕಮಗಳೂರು: ನಗರದ ಅರಣಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಯ ಸಹೋದರಿಗೆ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂಳೆ ತಜ್ಞ ವೈದ್ಯ ವೆಂಕಟೇಶ್ ಮೇಲೆ ಚಪ್ಪಲಿಯಿಂದ ಮಹಿಳೆಯ ಹಲ್ಲೆ ಖಂಡಿಸಿ ಆಸ್ಪತ್ರೆಯ ಒಪಿಡಿ ಬಂದ್‌ ಗೊಳಿಸಿದ ಘಟನೆ ನಡೆದಿದೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ವೈದ್ಯರ ಮೇಲೆ ಹಲ್ಲೆಯನ್ನು ಖಂಡಿಸಿ ಓಪಿಡಿ ಬಂದ್‌ ಮಾಡಿ ಆಸ್ಪತ್ರೆ ಸಿಬ್ಬಂದಿ ಅಕ್ರೋಶ ವ್ಯಕ್ತಪಡಿಸಿದ್ದಾರೆ, ಮೂಳೆ ತಜ್ಞ ವೆಂಕಟೇಶ್ ಶರ್ಟ್ ಹಿಡಿದು ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ ಮಹಿಳೆ ರಂಪಾಟ ಮಾಡಿದ್ದಾಳೆ. ಈ ವೇಳೆ ರಕ್ಷಣೆ ನೀಡುವಂತೆ ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿಗಳಿಂದ ಪ್ರತಿಭಟನೆ ಸಹಾ ನಡೆಸಲಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಅಸ್ಪತ್ರೆಗೆ ಬಂದಿದ್ದ ಯುವಕನಿಗೆ ಚಿಕಿತ್ಸೆ ನೀಡುವ ಸಮಯದಲ್ಲಿ ವೈದ್ಯ ವೆಂಕಟೇಶ್ ರೋಗಿ ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬ ಆರೋಪ ಕೇಳಿ ಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ರೋಗಿಯ ಅಕ್ಕನಿಂದ ವೈದ್ಯನ ಮೇಲೆ ಎರಗಿದ್ದಾರಂತೆ ಘಟನೆ ಖಂಡಿಸಿ ಜಿಲ್ಲಾಸ್ಪತ್ರೆಯ ಓಪಿಡಿಯನ್ನು ಬಂದ್ ಮಾಡಿ ನ್ಯಾಯವನ್ನು ಕೊಡಿಸುವಂತೆ ಅಸ್ಪತ್ರೆ ಸಿಬ್ಬಂದಿಗಳ ಅಗ್ರಹಿಸಿದ್ದಾರೆ. ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಕೆಲಕಾಲ ಪ್ರಕ್ಷಬ್ದ ವಾತಾವರಣ ನಿರ್ಮಾಣವಾಗಿತ್ತು.

Previous articleಉದ್ಯಮವೂ ಇಲ್ಲ, ಉದ್ಯೋಗವೂ …
Next articleರಾಜನಾಥಸಿಂಗ್- ಎಂ.ಬಿ.ಪಾಟೀಲ್ ಮಹತ್ವದ ಮಾತುಕತೆ