Home Advertisement
Home ನಮ್ಮ ಜಿಲ್ಲೆ ವೇತನ ಪರಿಷ್ಕರಣೆ: ಸಿಹಿ ಸುದ್ದಿ

ವೇತನ ಪರಿಷ್ಕರಣೆ: ಸಿಹಿ ಸುದ್ದಿ

0
118
CM

ಬೆಂಗಳೂರು: ಕೆ.ಪಿ.ಟಿ. ಸಿ.ಎಲ್ ನೌಕರರು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮಂತ್ರಿಗಳು ಸುದೀರ್ಘವಾಗಿ ಚರ್ಚಿಸಿ ಶೇ 20 ರಷ್ಟು ವೇತನ ಪರಿಷ್ಕರಣೆಗೆ ಒಪ್ಪಿದ್ದು, ಇಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಸಾರಿಗೆ ನೌಕರರಿಗೆ ಶೇ 15 ರಷ್ಟು ವೇತನ ಪರಿಷ್ಕರಣೆ ಹಾಗೂ
ಸಾರಿಗೆ ಇಲಾಖೆ ನೌಕರರಿಗೆ ಶೇ 15 ರಷ್ಟು ವೇತನ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಈ ಎರಡೂ ಆಜ್ಞೆ ಇಂದು ಹೊರಡಿಸಲಾಗುವುದು ಎಂದರು.