ವೃತ್ತಕ್ಕೆ ಸಾವರ್ಕರ್ ಹೆಸರು: ಪಾಲಿಕೆ ಸಭೆಯಲ್ಲಿ ಕೋಲಾಹಲ

0
25
Surtkal

ಇಂದು ಸಭೆ ಆರಂಭವಾಗುತ್ತಿದಂತೆ ಸದನದ ಬಾವಿಗಿಳಿದ ಕಾಂಗ್ರೆಸ್​ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಾವರ್ಕರ್ ಧಿಕ್ಕಾರ ಹಾಕಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ಜೈಕಾರ ಹಾಕಿದ್ದಾರೆ. ಕೆಲಹೊತ್ತು ಪಾಲಿಕೆ ಸಭೆಯಲ್ಲಿ ಸಾವರ್ಕರ್ ಜೈಕಾರ – ಧಿಕ್ಕಾರ ಘೋಷಣೆಗಳು ಮೊಳಗಿದವು. ಆ ಬಳಿಕ ಪ್ರತಿಪಕ್ಷ ಮುಖಂಡರೊಂದಿಗೆ ಮೇಯರ್ ಮಾತುಕತೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ನಾಮಕರಣ ವಿಚಾರ ಗದ್ದಲಕ್ಕೆ ಕಾರಣವಾಗಿದೆ. ಕಳೆದ ತಿಂಗಳ ಸಭೆಯಲ್ಲಿ ಕಾಂಗ್ರೆಸ್​ ಸದಸ್ಯರಿಗೆ ತಿಳಿಯದಂತೆ ಅಂಗೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆಕ್ಷೇಪ ದಾಖಲಿಸಲು ಮೇಯರ್ ಜಯಾನಂದ ಅವರು ಒಪ್ಪಂದ ಕಾರಣ, ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಎದುರು ಧರಣಿ ಆರಂಭಿಸಿದರು. ಬಳಿಕ ಮೇಯರ್ ಅವರು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು. ಸಭೆ ಮತ್ತೆ ಆರಂಭವಾದಾಗ, ಮೇಯರ್, ಪ್ರತಿಪಕ್ಷದ ಎಲ್ಲ ಸದಸ್ಯರ ಆಕ್ಷೇಪವನ್ನು ದಾಖಲಿಸಿ ಪ್ರಸ್ತಾಪವನ್ನು ಅಂಗೀಕರಿಸುವುದಾಗಿ ತಿಳಿಸಿದರು.

Previous articleಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸುವ ಸಮ್ಮೇಳನದ ಲಾಂಛನ ಬಿಡುಗಡೆ
Next articleವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಹಸು; ರೈಲಿನ ಮುಂಭಾಗ ಜಖಂ