ವೀಣಾ ಭಾರದ್ವಾಜ ಮಹಾಪೌರ, ಸತೀಶ ಹಾನಗಲ್ ಉಪಮಹಾಪೌರ ಅಂತಿಮ

0
29

ಧಾರವಾಡ: ತೀವ್ರ ಕುತೂಹಲ ಕೆರಳಿಸಿರುವ ಹು-ಧಾ ಮಹಾನಗರ ಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ದಾಂಡೇಲಿಯಿಂದ ಧಾರವಾಡಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು. ಒಟ್ಟು ೩೯ ಜನ ಬಿಜೆಪಿ ಪಾಲಿಕೆ ಸದಸ್ಯರು ಒಂದೇ ಬಸ್ ನಲ್ಲಿ ನೇರವಾಗಿ ಮಂದಾರ ಹೊಟೇಲ್‌ಗೆ ಆಗಮಿಸಿದ್ದಾರೆ.
ಮಂದಾರ ಸಭಾಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ಮಹಾಪೌರ ಮತ್ತು ಉಪಮಹಾಪೌರರ ಹೆಸರು ಬಹಿರಂಗಪಡಿಸಲಿರುವ ಬಿಜೆಪಿ ನಾಯಕರು. ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಸದಸ್ಯರನ್ನು ಮಹಾಪೌರರನ್ನಾಗಿ ಮಾಡಲಾಗುತ್ತಿದ್ದು, ಧಾರವಾಡಕ್ಕೆ ಉಪಮಹಾಪೌರ ಸ್ಥಾನ ನೀಡಲು ಸ್ಥಳೀಯ ಮುಖಂಡರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleಪ್ಲಾನ್ ಇಲ್ಲದೇ ಯೋಜನೆ ಜಾರಿ
Next articleಚೆನ್ನಮ್ಮ ವೃತ್ತದಲ್ಲಿ ಬಿಗುವಿನ ವಾತಾವರಣ: ಬಿಗು ಬಂದೋಬಸ್ತ