ವಿಷರಹಿತ ಹಾವೆಂದು ಹಿಡಿದ ಕನ್ನಡಿ ಹಾವಿಂದ ಸಾವು

0
29

ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕನ್ನಡಿ ಹಾವನ್ನು ಕೈಯಲ್ಲಿ ಹಿಡಿದ ವೇಳೆ ಕೈಗೆ ಕಚ್ಚಿ ವ್ಯಕ್ತಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ಇಂದು ನಡೆದಿದೆ.
ಬಜ್ಪೆಯ ರಾಮಚಂದ್ರ ಪೂಜಾರಿ(೫೫) ಮೃತರು. ಗುರುವಾರ ಬಜ್ಪೆ ಪರಿಸರದಲ್ಲಿ ಕನ್ನಡಿ ಹಾವೊಂದು ಕಾಣಿಸಿಕೊಂಡಿತ್ತು ಇದನ್ನು ರಾಮಚಂದ್ರ ಪೂಜಾರಿ ಅವರು ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕೈಯಲ್ಲಿ ಹಿಡಿದಿದ್ದಾರೆ. ಆದರೆ ಈ ವೇಳೆ ಹಾವು ರಾಮಚಂದ್ರ ಅವರ ಕೈಗೆ ಕಚ್ಚಿದೆ, ಇದನ್ನು ಗಂಭೀರವಾಗಿ ಪರಿಗಣಿಸದ ರಾಮಚಂದ್ರ ಅವರು ಮನೆಗೆ ತೆರಳಿದ್ದರು ಆದರೆ ಸಂಜೆಯಾಗುತ್ತಲೇ ಅವರ ಅರೋಗ್ಯ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Previous articleನಾಲೆಗಳಿಗೆ ಹರಿಯದ ಕಾವೇರಿ ನೀರು: ಕುಮಾರಸ್ವಾಮಿ ಕಿಡಿ
Next articleಕಾಂಗ್ರೆಸ್ ಸರ್ಕಾರದಲ್ಲಿ ಗಣೇಶ ಭಕ್ತರೇ ಟಾರ್ಗೆಟ್