ವಿಷಪೂರಿತ ಆಹಾರ ಸೇವನೆ: ನವೋದಯ ಶಾಲೆಯ ಮಕ್ಕಳು ಅಸ್ವಸ್ಥ

0
21

ಚಿತ್ರದುರ್ಗ: ವಿಷಪೂರಿತ ಆಹಾರ ಸೇವನೆಯಿಂದ ಸುಮಾರು 10 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುವಳ್ಳಿ ನವೋದಯ ಶಾಲೆಯಲ್ಲಿ ನಡೆದಿದೆ.
ಉಡುವಳ್ಳಿ ನವೋದಯ ಶಾಲೆಯ ಮಕ್ಕಳು ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಅನಾರೋಗ್ಯ ಬಿಗಡಾಯಿಸಿದ್ದು ವಾಂತಿ-ಭೇದಿ ಶುರುವಾಗಿದೆ. 10 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡಿದ್ದು, ಕೂಡಲೆ ಅವರನ್ನು ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಕ್ತ ತನಿಖೆ ನಡೆಸುವಂತೆ ಪೊಷಕರ ಒತ್ತಾಯಿಸಿದ್ದಾರೆ.

Previous articleಮಾತು ಮುತ್ತು
Next articleಒಡಕಿನಧ್ವನಿ ಬೇಡ, ಕೇಂದ್ರಕ್ಕೆ ಸ್ಪಷ್ಟ ಸಂದೇಶ ಅಗತ್ಯ