ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ನಿರ್ಗಮನ ದ್ವಾರದಿಂದ ಹೊರಬಂದ ಪ್ರಯಾಣಿಕರು

0
36

ನವದೆಹಲಿ: ಇಂಡಿಗೋ ವಿಮಾನಕ್ಕೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣ ಅಧಿಕಾರಿಗಳು ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ನಿರ್ಗಮನ ಬಾಗಿಲುಗಳ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿರುವ ಘಟನೆ ನಡೆದಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಬೆದರಿಕೆ ಬಂದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೂಡಲೇ ಸ್ಥಳಾಂತರಿಸಲಾಯಿತು. ಬಳಿಕ ವಿಮಾನವನ್ನು ಪ್ರತ್ಯೇಕ ಪ್ರದೇಶಕ್ಕೆ ಕೊಂಡೊಯ್ಯಲಾಯಿತು. ಬಾಂಬ್ ಸ್ಕ್ವಾಡ್ ಮತ್ತು ಸಿಐಎಸ್‌ಎಫ್ ತಂಡವನ್ನು ಸ್ಥಳಕ್ಕೆ ಕರೆಸಿ ಶೋಧ ನಡೆಸಿದ್ದು, ಹುಸಿ ಬೆದರಿಕೆ ಎಂಬುದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

Previous articleಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ
Next articleಕೆಲಸ ಕೊಡಿಸುವುದಾಗಿ ನಂಬಿಸಿ ವಿದೇಶಕ್ಕೆ ಕಳ್ಳಸಾಗಾಟ: ದೇಶಾದ್ಯಂತ NIA ರೇಡ್‌