ವಿದ್ಯುತ್ ಸ್ಪರ್ಶಿಸಿ 2 ಗಂಡು ಕಾಡಾನೆ ಸಾವು

0
30
ಕಾಡಾನೆ ಸಾವು

ಶಿವಮೊಗ್ಗ: ತಾಲೂಕಿನ ಚನ್ನಹಳ್ಳಿ ಸಮೀಪ ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದಲ್ಲಿ ಜಮೀನಿಗೆ ಅಳವಡಿಸಿದ್ದ ಐಬಿಎಕ್ಸ್ ವಿದ್ಯುತ್ ಸ್ಪರ್ಶಿಸಿ ಎರಡು ಗಂಡು ಕಾಡಾನೆಗಳು ಮೃತಪಟ್ಟ ಘಟನೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಮಾಲೀಕ ಚಂದ್ರನಾಯ್ಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಂದು ಆನೆ ೨೦ ವರ್ಷ ಹಾಗೂ ಮತ್ತೊದು ೧೦ ವರ್ಷದ ಆನೆ ಎನ್ನಲಾಗಿದೆ.
ಮೆಕ್ಕೆಜೋಳದ ಜಮೀನಿಗೆ ಅಳವಡಿಸಿದ್ದ ಐಬಿಎಕ್ಸ್ ವಿದ್ಯುತ್‌ನ್ನು ಸ್ಪರ್ಶಿಸಿ ಆನೆಗಳು ಸಾವನ್ನಿಪ್ಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನೇರವಾಗಿ ವಿದ್ಯುತ್ ಕಂಬದಿಂದ ಬೇಲಿಗೆ ವಿದ್ಯುತ್ ಹರಿಸಿದ್ದ ಪರಿಣಾಮ ಆನೆಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ಆಯನೂರು ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Previous articleವೀರಶೈವ ಲಿಂಗಾಯತ ಮುಖಂಡರ ಕಡೆಗಣನೆ: ಈಶ್ವರ್ ಖಂಡ್ರೆ ವಾಗ್ದಾಳಿ
Next articleನಿಮ್ಮ ಟೀಕೆಗಳು, ಅವಮಾನ ಅಪಮಾನವೇ ನನ್ನ ಮೆಟ್ಟಿಲು: ಸಿಎಂ ಬೊಮ್ಮಾಯಿ‌