ವಿದ್ಯುತ್ ಬಿಲ್ ಕಟ್ಟದ ನೇಕಾರರು: ಗೊಂದಲದಲ್ಲಿ ಹೆಸ್ಕಾಂ

0
13

ಕಳೆದ ಮೂರು ತಿಂಗಳಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನೇಕಾರರು ವಿದ್ಯುತ್ ಬಿಲ್ ಕಟ್ಟದೆ ಹಾಗೇ ಬಾಕಿ ಉಳಿಸಿಕೊಂಡ ಪ್ರಸಂಗನಡೆದಿದ್ದರೆ, ಮತ್ತೊಂದೆಡೆ ಬಿಲ್ ಸಂದಾಯ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವದಾಗಿ ನೇಕಾರರಿಗೆ ಹೆಸ್ಕಾಂ ತಾಕೀತು ನಡೆಸುತ್ತಿದೆ.
ನೇಕಾರರ ಸಮಸ್ಯೆಗಳ ಪರಿಹರಿಸುವಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲರು ವಿಫಲಗೊಂಡಿದ್ದು, ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸಲು ಜುಲೈ 31 ಗಡುವು ನೀಡಿದ್ದು, ಇದಕ್ಕೆ ಪರಿಹಾರ ದೊರಕದಿದ್ದಲ್ಲಿ ಅ.1 ರಂದು ಬೆಂಗಳೂರಿನ ಸಿಎಂ ನಿವಾಸದೆದುರು ಧರಣಿ ಸತ್ಯಾಗ್ರ ನಡೆಸಲಾಗುವದೆಂದು ನೇಕಾರ ಒಕ್ಕೂಟ ಸ್ಪಷ್ಟನೆ ನೀಡಿದೆ.

Previous articleಭಾರಿ ಮಳೆ ವೇಳೆ ಕ್ಷೇತ್ರ ಭೇಟಿ ಬೇಡ
Next articleಪೊಲೀಸ್ ಸಿಬ್ಬಂದಿಯ ಮೇಲೆಯೇ ನೈತಿಕ ಪೊಲೀಸ್ ಗಿರಿ ಆರೋಪ ಇಬ್ಬರ ಬಂಧನ