ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತ

0
31

ಚಿಕ್ಕಮಗಳೂರು : ಜಿಲ್ಲೆಗೆ ವಲಸೆ ಬಂದು ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಬೀಟಮ್ಮ ಆನೆ ಗ್ಯಾಂಗ್‌ನ ಒಂದು ಸಲಗ ಸಾವನ್ನಪಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದ್ದು ಆಲ್ದೂರು ಸಮೀಪದ ತುಡುಕೂರು ಗ್ರಾಮದ ಕಾಫಿ ತೋಟಗಳ ನಡುವೆ ಮೃತ ಆನೆಯ ದೇಹ ಪತ್ತೆಯಾಗಿದೆ. ಕಾಫಿನಾಡಲ್ಲಿ 17 ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗಿನ ಹಾವಳಿ ವಿಪರೀತಗೊಂಡಿತ್ತು. ಈ ನಡುವೆ ಇಂದು ಬೀಟಮ್ಮ ಗ್ಯಾಂಗ್‌ನ ಒಂದು ಸಲಗ ಸಾವನ್ನಪಿದೆ ವಿದ್ಯುತ್ ಸ್ಪರ್ಶಿಸಿ ಒಂದು ಸಲಗ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Previous articleಬೋಗಿ ಚಲಿಸುವಾಗ ಸಿಕ್ಕಿಬಿದ್ದ ಕಾರ್ಮಿಕ
Next articleನೀವೇನು ಬಳ್ಳಾರಿ ಯಜಮಾನರಾ…?