ವಿದ್ಯುತ್ ಕಡಿತದಿಂದ 4 ರೋಗಿಗಳು ಸಾವು ತನಿಖೆಗೆ ಆರೋಗ್ಯ ಸಚಿವ ಆದೇಶ

0
21

ಬಳ್ಳಾರಿ: ಇತ್ತೀಚಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತದಿಂದ ನಾಲ್ಕು ರೋಗಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ತನಿಖೆಗೆ ಆದೇಶಿಸಿದ್ದಾರೆ.

ದುರಂತದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ಈಗ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಡಾ. ಸ್ಮಿತಾ ನೇತೃತ್ವದಲ್ಲಿ ಐವರ ಸಮಿತಿ ರಚನೆ ಮಾಡಿ ತನಿಖೆ ನಡೆಸುವಂತೆ ಸಮಿತಿ ರಚನೆ ಮಾಡಿದ್ದಾರೆ. ಅಲ್ಲದೇ, ತುರ್ತಾಗಿ ದುರಂತದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತವಾಗಿ ಆಕ್ಸಿಜನ್ ನಲ್ಲಿದ್ದ ಮೂವರು ಮೃತ ಪಟ್ಟಿದ್ದರು ಆದರೆ, ಸಾವನ್ನಪ್ಪಿದ್ದು ಮೂವರು ನಾಲ್ವರು. ಆದರೆ ಅದೇ ದಿನ ಮನೋಜ್(18) ಎಂಬ ಯುವಕನ ಸಾವೀಗಿಡಾಗಿದ್ದಾನೆ. ಮೃತ ಮನೋಜ್ ನನ್ನ ಪೋಷಕರಿಗೆ ತಿಳಿಸದೇ ಬೇರೆ ವಾರ್ಡ್ ಗೆ ವಿಮ್ಸ್ ಸಿಬ್ಬಂದಿಗಳು ಶಿಫ್ಟ್ ಮಾಡಿದ್ದಾರೆ ಎಂದು ಪೋಷಕರು ಇಂದು ಆಕ್ರೋಶ ವ್ಯಕ್ತಪಡಿಸಿದರು.

Previous articleಬಿಎಸ್ ವೈ ರಾಜೀನಾಮೆಗೆ ಶಾಸಕ ಯತ್ನಾಳ್ ಆಗ್ರಹ
Next articleಸಿದ್ದರಾಮಯ್ಯ ಬಳಿ ಒಟ್ಟು ಎಂಟು ವಾಚ್ ಗಳಿವೆ; ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ…